ನವದೆಹಲಿ: ಏಳು ರಾಜ್ಯಗಳ 59 ಸ್ಥಾನಗಳಿಗೆ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಶೇ. 63. 3 ರಷ್ಟು ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾನ ನಡೆದ ಎಲ್ಲಾ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಒಟ್ಟಾರೇ, ಶೇಕಡವಾರು ಮತದಾನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಪ್ರದೇಶದ 14, ಹರಿಯಾಣದ 10 ಹಾಗೂ ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ 8, ದೆಹಲಿಯ 7 ಹಾಗೂ ಜಾಖರ್ಂಡ್ ನಲ್ಲಿನ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯಿತು.
ಪಶ್ಚಿಮ ಬಂಗಾಳದಲ್ಲಿ ಶೇ. 80.35, ದೆಹಲಿ- 59. 74, ಹರಿಯಾಣ- 68. 17, ಉತ್ತರ ಪ್ರದೇಶ- 54. 72, ಬಿಹಾರ-59. 29, ಜಾಖರ್ಂಡ್ -64.50 ಹಾಗೂ ಮಧ್ಯ ಪ್ರದೇಶದಲ್ಲಿ ಶೇ, 64. 55 ರಷ್ಟು ಮತದಾನವಾಗಿದೆ.