ಬದಿಯಡ್ಕ: ನಮ್ಮ ಸಂಸ್ಕøತಿಗೆ ಸಂಬಂಧಿಸಿ ನಿರಂತರ ಚಟುವಟಿಕೆಗಳು ನಡೆಯುತ್ತಿದ್ದಾಗ ಮಾತ್ರ ಜೀವಂತಿಕೆ ಉಳಿಯಲು ಸಾಧ್ಯ. ರಂಗಸಿರಿಯು ಕಳೆದ ಒಂಭತ್ತು ವರ್ಷಗಳಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದು, ಹಲವಾರು ಪ್ರತಿಭೆಗಳನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಿರುವುದು ಶ್ಲಾಘ್ಯ ಎಂದು ಅನುಭವೀ ಯಕ್ಷಗಾನ ಅರ್ಥದಾರಿ, ಸಂಘಟಕ ಹಾಗೂ ರಂಗಸಿರಿಯ ಗೌರವ ಸಲಹೆಗಾರ ಲಕ್ಷ್ಮಣ ಪ್ರಭು ಕರಿಂಬಿಲ ಹೇಳಿದರು.
ಬದಿಯಡ್ಕ ಕೇಂದ್ರವಾಗಿಸಿಕೊಂಡು ಕಾಸರಗೋಡಿನ ಭಾಷೆ, ಸಂಸ್ಕøತಿಯ ಉಳಿವಿಗಾಗಿ ನಿರಂತರ ಚಟುವಟಿಕೆಯಿಂದ ಕಾರ್ಯಾಚರಿಸುತ್ತಿರುವ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಒಂಭತ್ತನೇ ವಾರ್ಷಿಕೋತ್ಸವ ರಂಗಸಿರಿ ಸಂಭ್ರಮ 2019 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು.
ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆವಹಿಸಿದ್ದರು. ರಂಗಸಿರಿಯ ಸ್ಥಾಪಕ, ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಸ್ವಾಗತಿಸಿ, ಸದಸ್ಯ ಉದನೇಶ ಕುಂಬ್ಳೆ ವಂದಿಸಿದರು. ರಂಗಸಿರಿ ಸಂಭ್ರಮ 2019 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮೇ.18ರಂದು ಮಧ್ಯಾಹ್ನ 2ಗಂಟೆಯಿಂದ ತಡರಾತ್ರಿಯ ತನಕ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ನಡೆಯಲಿದೆ.