HEALTH TIPS

ಆಸಕ್ತಿ, ಕಠಿಣ ಶ್ರಮ,ಮನೋ ಸಾಮಥ್ರ್ಯ, ಕೌಶಲ್ಯದಿಂದ ಸಾಧನೆಯ ಉತ್ತುಂಗ- ಕಾಟುಕುಕ್ಕೆಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ವಿಶೇಷ ಮಾಹಿತಿ ಶಿಬಿರ ಸೇಫ್ ಝೋನ್ -2019 ಅಧ್ಯಕ್ಷತೆ ವಹಿಸಿ ಉಪನ್ಯಾಸಕಿ ಸೌಮ್ಯ ಸುಭಾಶ್ ರೈ



        ಪೆರ್ಲ:ಪ್ರತಿಯೊಬ್ಬರಲ್ಲೂ ಅಗಾಧ ಪ್ರಮಾಣದ ಶಕ್ತಿ ಸಾಮಥ್ರ್ಯಗಳು ಹುದುಗಿವೆ.ಅವಕಾಶಗಳನ್ನು ಹುಡುಕ್ಕುತ್ತಾ ಹೋಗುವುದಕ್ಕಿಂತ ನಮ್ಮಲ್ಲಿ ಅಡಗಿರುವ ಸುಪ್ತ ಸಾಮಥ್ರ್ಯಗಳನ್ನು ಅರಿತು ಅಗತ್ಯ ಮಾರ್ಗದರ್ಶನ, ತರಬೇತಿ ಪಡೆದು ಸತತ ಅಭ್ಯಾಸ ನಡೆಸಿದಲ್ಲಿ ಗರಿಷ್ಟ ಪ್ರಮಾಣದಲ್ಲಿ ನಮ್ಮ ಸಾಧನೆಯನ್ನು ಅಭಿವ್ಯಕ್ತಿಪಡಿಸಲು ಸಾಧ್ಯ ಎಂದು ಮಂಗಳೂರು ಯಸ್.ಡಿ.ಎಂ.ಕಾನೂನು ಕಾಲೇಜು ಉಪನ್ಯಾಸಕಿ ಸೌಮ್ಯ ಸುಭಾಶ್ ರೈ ಹೇಳಿದರು.
     ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಪೆರ್ಲ ಆಶ್ರಯದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಸಭಾಂಗಣದಲ್ಲಿ ಸನ್ನಿಧಿ ಟಿ.ರೈ ನಿರ್ದೇಶನದಲ್ಲಿ ಭಾನುವಾರ ನಡೆದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿ ಉಚಿತ ಮಾಹಿತಿ ಶಿಬಿರ ಸೇಫ್ ಝೋನ್- 2019 ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಹಿಂದೆ ಅವಕಾಶಗಳ ಮುಕ್ತ ಬಳಕೆಯ ಅವಕಾಶಗಳಿರಲಿಲ್ಲ.ಇಂದು ಕಾಲಾ, ಸ್ಥಿತಿಗತಿಗಳು ಬದಲಾಗಿವೆ.ಶಾಲೆ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಯಾರಿಗೆ ಏನನ್ನು ಬೇಕಾದರೂ ಆರಿಸುವ ಮುಕ್ತ ಅವಕಾಶಗಳು ಲಭ್ಯವಿದೆ.ಕಠಿಣ ಪ್ರಯತ್ನ ಹಾಗೂ ಅವಕಾಶಗಳ ಸದ್ಬಳಕೆ ಮಾಡಿ ತಮ್ಮಲ್ಲಿನ ವಿಶಿಷ್ಟ ಸಾಧನೆಗಳನ್ನು ಪರಿಚಯಿಸುವ ಮೂಲಕ ಯಶಸ್ಸಿನ ಉತ್ತುಂಗವನ್ನೇರಬಹುದು. ಪ್ರತಿಯೊಬ್ಬ ಸಾಧಕನೂ ಅಡೆ ತಡೆಗಳನ್ನು ಅನುಭವಿಸಿ, ಅವುಗಳನ್ನು ದಾಟಿ ಮುಂದೆ ಬಂದಿರುತ್ತಾರೆ.ಕೆಲವೊಂದು ಸಂದರ್ಭಗಳಲ್ಲಿ ಅವಕಾಶಗಳಿಂದ ವಂಚಿತರಾಗುವುದು, ಇಚ್ಚಿಸಿದುದು ಲಭಿಸದೆ ಮನಸ್ಸಿನಲ್ಲಿ ಬೇಸರ, ಭಾವೋದ್ರೇಕಗಳು ಮೂಡುವುದು ಸಹಜ. ಅವಕಾಶದಿಂದ ವಂಚಿತರಾದಾಗ ತಪ್ಪಿನ ಬಗ್ಗೆ ಸೂಕ್ತ ಚಿಂತನೆ ನಡೆಸಬೇಕು.ವಂಚಿತ ಅವಕಾಶದ ಚಿಂತೆ ಬಿಟ್ಟು ಮುಂದಿನ ದಿನಗಳಲ್ಲಿ ಏನು ಮಾಡ ಬಹುದು ಎಂಬುದನ್ನು ಅರಿಯಬೇಕು.ಹೊಸದನ್ನು ಪಡೆಯುವ ಅವಕಾಶ ನಮಗಿದ್ದೇ ಇರುತ್ತದೆ.ಹೆಚ್ಚಿನ ಆಸಕ್ತಿ, ಕಠಿಣ ಶ್ರಮ ವಹಿಸಿ ಕೌಶಲ್ಯ ಮತ್ತು ಮನೋ ಸಾಮಥ್ರ್ಯ ಹೆಚ್ಚಿಸಿ ಗುರಿ ನಿಗದಿಪಡಿಸಿ ಸಿಗುವ ಎಲ್ಲಾ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿದಲ್ಲಿ ಸಾಧನೆಯ ಮೆಟ್ಟಿಲನ್ನು ಏರಲು, ಬದುಕಿನ ಕನಸನ್ನು ನನಸಾಗಿಸಬಹುದು. ತನ್ನ ಸಾಧನೆಯೊಂದಿಗೆ ಉಚಿತ ತರಬೇತಿ ನೀಡುವ ಮೂಲಕ ಇತರ ಮಕ್ಕಳನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯುವ ನಿರ್ದೇಶಕಿ ಸನ್ನಿಧಿಯ ಪ್ರಯತ್ನ ಅಭಿನಂದನೀಯ ಎಂದರು.
     ದೇವಳದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಲೇಖಕಿ, ಆಕಾಶವಾಣಿ ಉದ್ಘೋಷಕಿ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ ಮಾತನಾಡಿ, ಜೀವನ ಕನಸುಗಳಿಂದ ತುಂಬಿ ತುಳುಕುತ್ತಿರಬೇಕು.ಬದುಕಿನಲ್ಲಿ ಹೊಂದಾಣಿಕೆ ಮತ್ತು ನೆಮ್ಮದಿ ಮುಖ್ಯ.ಸೋಲಿಗೆ ನಿರಾಸೆ ಹೊಂದದೆ ಸಾಧನೆಯ ನಿರಂತರ ಪ್ರಯತ್ನ ನಡೆಸಬೇಕು ಎಂದರು.
    ದೀಪಕ್ ಭಂಡಾರದ ಮನೆ ಮಾತನಾಡಿ, ಆತ್ಮವಿಶ್ವಾಸ ವಿದ್ದಲ್ಲಿ ಯಶಸ್ಸು ಖಂಡಿತ.ಗಾಂಧೀಜಿಯವರು ಹೇಳಿದಂತೆ ಮಹಿಳೆಯರು ನಡುರಾತ್ರಿಯಲ್ಲೂ ನಿರ್ಭೀತಿಯಿಂದ ನಡೆದಾಡುವಂತಾದರೆ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಲಭಿಸುವುದು ಎಂದರು. ದೇವಳದ ಆಡಳಿತ ಮಂಡಳಿ ಸದಸ್ಯ ಸುಬ್ರಹ್ಮಣ್ಯ ಕೋಡುಮಾಡು, ರಂಗ ನಿರ್ದೇಶಕ ಉದಯ ಸಾರಂಗ್ ಉಪಸ್ಥಿತರಿದ್ದರು.ಕರಾಟೆ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಿಸಲಾಯಿತು. ಅನುಶ್ರೀ, ಹರ್ಷಿಣಿ, ಸಿಂಚನ ಪ್ರಾರ್ಥಿಸಿದರು.ಅಕ್ಷತಾ ಸ್ವಾಗತಿಸಿ ನಿರೂಪಿಸಿದರು.ಸಹನಾ ವಂದಿಸಿದರು.
* ರಾಜಕೀಯ ಉತ್ಸಾಹ ಮುಖ್ಯವಲ್ಲ.ಆದರೆ ರಾಜಕೀಯ ಪ್ರಜ್ಞೆ ಪ್ರತಿಯೊಬ್ಬನಲ್ಲೂ ಇರಬೇಕು
* ಸನ್ಮಾನಗಳು ಇದ್ದಲ್ಲಿ ಅವಮಾನಗಳೂ ಇರುತ್ತವೆ.ಸನ್ಮಾನಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದು

* ಪ್ರತಿಯೊಂದು ಸೋಲೂ ಮುಂದಿನ ಅವಕಾಶದ ಪ್ರಥಮ ಹೆಜ್ಜೆ

*ಶಾಂತಿಯ ಸಂಕೇತ ಮದರ್ ಥೆರೇಸಾ ಜೀವನ ಪೂರ್ತಿ ಅನಾಥ, ನಿರ್ಗತಿಕರಿಗೆ ತಮ್ಮ ಜೀವನ ಮುಡಿಪಾಗಿರಿಸಿದ್ದರು

                  - ಸೌಮ್ಯ ಸುಭಾಶ್ ರೈ
                    ಕಾನೂನು ಉಪನ್ಯಾಸಕಿ,
                ಯಸ್.ಡಿ.ಎಂ. ಕಾಲೇಜು, ಮಂಗಳೂರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries