ನವದೆಹಲಿ: ವಿವಿಪ್ಯಾಟ್ ಪರಿಶೀಲನೆ ಪ್ರಮಾಣವನ್ನು ಏರಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ 2019 ನೇ ಲೋಕಸಭಾ ಚುನವಾಣೆಯ ಫಲಿತಾಂಶ ವಿಳಂಬವಾಗುವ ಸಾಧ್ಯತೆಯ ಬಗ್ಗೆ ಚುನಾವಣಾ ಆಯೋಗ ಸುಳಿವು ನೀಡಿದೆ.
ಪೂರ್ವ ನಿಗದಿಯಂತೆ ಲೋಕಸಭಾ ಚುನಾವಣೆಯ ಫಲಿತಾಂಶ ಮೇ.23 ಕ್ಕೆ ಪ್ರಕಟವಾಗಬೇಕಿತ್ತು. ಆದರೆ ವಿವಿಪ್ಯಾಟ್ ದೃಢೀಕರಣ ಸಂಖ್ಯೆಯನ್ನು ಏರಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಮೇ.24 ರಂದು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಚುನಾವಣಾ ಆಯೋಗದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಪ್ಯಾಟ್ ಎಣಿಕೆಯನ್ನು ಒಂದರಿಂದ 5 ಕ್ಕೆ ಏರಿಕೆ ಮಾಡಲಾಗಿದೆ. ಪರಿಣಾಮ ಮತ ಎಣಿಕೆಯಲ್ಲಿ 5-6 ಗಂಟೆಗಳು ವಿಳಂಬವಾಗಲಿದೆ, ಮೇ.24 ರಂದು ಅಧಿಕೃತ ಚಿತ್ರಣ ಸಿಗಬಹುದು ಎಂದು ತಿಳಿಸಿದ್ದಾರೆ.