ಕಾಸರಗೋಡು: ಲೋಕಸಭೆ ಚುನಾವಣೆಯ ಮತ ಎಣಿಕೆಯ ಮೇ 23ರಂದು ಮತ ಎಣಿಕೆ ಕೇಂದ್ರವಾದ ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಇದಕ್ಕಾಗಿ 250 ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಜಿಲ್ಲಾ ಚುನಾವಣೆ ಅಧಿಕಾರಿ, ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಕರ್ತವ್ಯದಲ್ಲಿರುವ ಸಿಬ್ಬಂದಿಗಾಗಿ ಸಮಗ್ರ ತರಬೇತಿ ಮೇ 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಕಾಸರಗೋಡು ಲೋಕಸಭೆ ಕ್ಷೆ?ತ್ರದಲ್ಲಿ ಒಳಗೊಂಡಿರುವ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ನಡೆಯುವುದು. ಇದಕ್ಕಾಗಿ ಪ್ರತಿ ವಿಧಾನಸಭೆ ಕ್ಷೆ?ತ್ರದ ಮತಗಣನೆಗೆ ತಲಾ 14 ಮೇಜುಗಳನ್ನು ಇರಿಸಲಾಗುವುದು.
ಏಕ ಕಾಲಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಹಿನ್ನೆಲೆಯಲ್ಲಿ ಮತ ಎಣಿಕೆ ನಡೆಯಲಿದೆ. ನಂತರ ಪ್ರತಿ ಮತಗಟ್ಟೆಯ ಫಲಿತಾಂಶ 17ಸಿ ಫಾರಂನಲ್ಲಿ ಮಾಹಿತಿ ರೂಪದಲ್ಲಿ ಎಣಿಕಾ ಏಜೆಂಟ್(ಕೌಂಟಿಂಗ್ ಏಜೆಂಟ)ರ ಸಮಕ್ಷದಲ್ಲಿ ಮತಗಣನೆ ಸಿಬ್ಬಂದಿ ಹೋಲಿಸಿ ನೋಡುವರು. ಆಯಾ ಮತಗಟ್ಟೆಗಳ ಕುರಿತು ಚುನಾವಣೆ ಅಧಿಕಾರಿ ನೀಡಿರುವ ಮಾಹಿತಿಗಳು 17ಸಿ ಫಾರಂನ ಮೊದಲ ಭಾಗದಲ್ಲಿ ಇರುವುದು. ಮತಗಟ್ಟೆಯ ಹೆಸರು, ನಂಬರ್, ಬಳಸಿದ ಮೆಷಿನ್‍ಗಳು, ಒಟ್ಟು ಮತದಾರರು, ಮತಯಂತ್ರದಲ್ಲಿ ದಾಖಲಾದ ಮತಗಳು, ಮತಗಟ್ಟೆಗಳಲ್ಲಿ ಬಳಸಲಾದ ಟೆಂಡರ್ಡ್ ಬ್ಯಾಲೆಟ್ ಪೇಪರ್‍ಗಳು, ಟೆಸ್ಟ್ ವೋಟುಗಳ ಸಂಖ್ಯೆ ಇತ್ಯಾದಿ ಮೂಲ ಮಾಹಿತಿಗಳು 17ಸಿ ಫಾರಂನ ಮೊದಲ ಭಾಗದಲ್ಲಿರುವುದು. ಎರಡನೇ ಭಾಗದಲ್ಲಿ ಮತ ಗಣನೆ ಕೇಂದ್ರದ ಮತ ಎಣಿಕಾ ಮೇಲ್ವಿಚಾರಕರ ಮಾಹಿತಿ ಸಹಿತ ಪ್ರತಿ ಅಭ್ಯರ್ಥಿಗೆ ಲಭಿಸಿದ ಒಟ್ಟು ಮತಗಳನ್ನು ದಾಖಲಿಸುವರು. ಈ ಫಲಿತಾಂಶಕ್ಕೆ ಮತ ಎಣಿಕಾ ಏಜೆಂಟರ ಸಮಕ್ಷದಲ್ಲಿ ಮತ ಎಣಿಕಾ ಮೇಲ್ವಿಚಾರಕರು ಸಹಿ ಮಾಡಲಿದ್ದಾರೆ. ಬಳಿಕ ಪ್ರತಿ ಮತಗಟ್ಟೆಯ ಫಲಿತಾಂಶ ಗಣನೆ ಮಾಡಿ ಆಯಾ ಸಮಯದಲ್ಲಿ ಸ್ಕ್ರೀನ್‍ನಲ್ಲಿ ಪ್ರಕಟಿಸಲಾಗುವುದು. ಮತಗಣನೆ ಕೇಂದ್ರದಲ್ಲಿ ಉಪಚುನಾವಣೆ ಅಧಿಕಾರಿ, ನಿರೀಕ್ಷಕರು, ಮೈಕ್ರೋ ನಿರೀಕ್ಷಕರು, ಸುರಕ್ಷೆ ಹೊಣೆಯ ಹಿರಿಯ ಅಧಿಕಾರಿಗಳು ಮತ್ತಿತರರು ಇರುವರು.
17ರಂದು ತರಬೇತಿ: ಲೋಕಸಭೆ ಚುನಾವಣೆಯ ಮತಗಣನೆ ಕರ್ತವ್ಯ ಸಿಬ್ಬಂದಿಗೆ ಮೇ 17ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಮತ ಎಣಿಕಾ ಮೇಲ್ವಿಚಾರಕರಿಗೆ ಮತ್ತು ಸಹಾಯಕ ಎಣಿಕಾ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗುವುದು. ಚುನಾವಣೆ ತರಬೇತಿ ನೋಡಲ್ ಅಧಿಕಾರಿ ಕೆ. ವಿನೋದ್ ಕುಮಾರ್ ತರಬೇತಿ ನೀಡುವರು.