ಮುಳ್ಳೇರಿಯ:ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಉಪನ್ಯಾಸಕ ಹುದ್ದೆ ನೇಮಕಾತಿಗೆ ಮೇ 25 ರಂದು ಮಧ್ಯಾಹ್ನ 1.30 ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನದ ಮೂಲಕ ನಡೆಯಲಿದೆ.
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಸೀನಿಯರ್.ಇಂಗ್ಲಿಷ್, ಸೀನಿಯರ್.ಪೊಲಿಟಿಕಲ್ ಸಯನ್ಸ್, ಸೀನಿಯರ್. ಸೋಶಿಯೋಲಜಿ, ಸೀನಿಯರ್.ಫಿಸಿಕ್ಸ್, ಸೀನಿಯರ್.ಕೆಮಿಸ್ಟ್ರಿ, ಜೂನಿಯರ್.ಮಲಯಾಳಂ, ಜೂನಿಯರ್.ಸಸ್ಯಶಾಸ್ತ್ರ, ಜೂನಿಯರ್.ಪ್ರಾಣಿಶಾಸ್ತ್ರ ವಿಷಯಗಳ ಉಪನ್ಯಾಸಕರ ಹುದ್ದೆಗೆ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಯಲಿದೆ.ಅರ್ಹ ಉದ್ಯೋಗಾರ್ಥಿಗಳು ಅಸಲಿ ದಾಖಲೆ ಪತ್ರಗಳೊಂದಿಗೆ ಕ್ಲಪ್ತ ಸಮಯದಲ್ಲಿ ಹಾಜರಿರುವಂತೆ ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7559899441 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.