ಕಾಸರಗೋಡು: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯ ವಾರ್ಷಿಕ ಮಹಾಸಭೆ ಮೇ. 26 ರಂದು ಅಪರಾಹ್ನ 12 ರಿಂದ ನಗರದ ಹೊಸಬಸ್ ನಿಲ್ದಾಣ ಸಮೀಪದ ಕಾಸರಗೋಡು ಸರ್ವೀಸ್ ಕೋಪರೇಟೀವ್ ಸಭಾಂಗಣದಲ್ಲಿ ನಡೆಯಲಿದೆ.
ಉಚಿತ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷಾ (ಪಿ. ಎಸ್.ಸಿ) ಉದ್ಯೋಗ ಮಾಹಿತಿ ಶಿಬಿರ, ಕನ್ನಡಕಂದನ ಸಿರಿಚಂದನಗಿಡ, ಯಕ್ಷನುಡಿಸರಣಿ ಮನೆಮನೆ ಅಭಿಯಾನ ಮತ್ತು ಕನ್ನಡ ಜಾಗೃತಿ ಮುಂತಾದ ಯೋಜನೆಗಳ ಮೂಲಕ ಉದ್ಯೋಗ ಜಾಗೃತಿ, ಪರಿಸರ ಕಾಳಜಿ ಹಾಗೂ ಭಾಷೆ ಮತ್ತು ಸಂಸ್ಕøತಿಯ ಮೇಲೆ ಅಭಿಮಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದುಡಿಯುತ್ತಿರುವ ಬಳಗವು ಕನ್ನಡದ ಹಲವು ಸಮಸ್ಯೆಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸಿದೆ. ವಿವಿಧ ಕನ್ನಡಪರ ಹೋರಾಟಗಳಲ್ಲಿ ಸಂಘಟನೆಗಳ ಜತೆ ಕೈಜೋಡಿಸಿದೆ. ಬಳಗದ ಕಾರ್ಯಚಟುವಟಿಕೆಗಳು ಮುಂದಿನ ವರ್ಷವೂ ಸುಸೂತ್ರವಾಗಿ ಮುಂದುವರಿಯಲು ಎಲ್ಲ ಕನ್ನಡಿಗರ ಸಹಾಯ ಸಹಕಾರಗಳ ಅಗತ್ಯವಿದೆ. ಸಭೆಯಲ್ಲಿ ಬಳಗದ ಸರ್ವಸದಸ್ಯರೂ, ಹಿತೈಷಿಗಳೂ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಿರಿಚಂದನದ ಬಳಗದ ಕಾರ್ಯದರ್ಶಿ ರಾಜೇಶ್ ಎಸ್.ಪಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.