ಇಸ್ಲಾಮಾಬಾದ್: ಪಾಕಿಸ್ತಾನದ ಆಗಸದಲ್ಲಿ ಭಾರತದ ವಿಮಾನ ಹಾರಾಟಕ್ಕೆ ವಿಧಿಸಿರುವ ನಿಬರ್ಂಧವನ್ನು ಪಾಕ್ ಮೇ 30ರವರೆಗೆ ವಿಸ್ತರಿಸಿದೆ. ಈ ನಡುವೆ ಭಾರತ ಲೋಕಸಭೆ ಚುನಾವಣೆ ಫಲಿತಾಂಶವನ್ನು ಕಾಯುತ್ತಿರುವ ಪಾಕಿಸ್ತಾನ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಯೋಜಿಸಿದೆ.
ಫೆಬ್ರವರಿ 26ರ ಬಾಲ್ ಕೋಟ್ ಜೈಶ್-ಇ-ಮೊಹಮ್ಮದ್ (ಜೆಎಂ) ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ್ದ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಭಾರತದ ಪಾಲಿಗೆ ತನ್ನ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿದೆ.ಆದರೆ ಮಾರ್ಚ್ 27ರಿಂದ ಪಾಕಿಸ್ತಾನ ನವದೆಹಲಿ, ಕೌಲಾಲಾಂಪುರ್, ಬಾಂಕಾಕ್ ಹೊರತು ಬೇರೆಲ್ಲಾ ಪ್ರದೇಶಗಳಿಗೆ ತೆರಳುವ ವಿಮಾನಕ್ಕೆ ತನ್ನ ವಾಯುಪ್ರದೇಶವನ್ನು ಮುಕ್ತವಾಗಿಸಿದೆ.
ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ತೆರೆಯುವ ಸಂಬಂಧ ಮರುಪರಿಶೀಲನೆ ನಡೆಸಲು ಭದ್ರತಾ ಮತ್ತು ವಾಯುಯಾನ ಸಚಿವಾಲಯದ ಉನ್ನತ ಅಧಿಕಾರಿಗಳು ಬುಧವಾರ ಸಭೆ ನಡೆಸಿದರು.ಅವರು ಪಾಕಿಸ್ತಾನದ ವಾಯುಪ್ರದೇಶವನ್ನು ಮೇ 30 ರವರೆಗೆ ಭಾರತೀಯ ವಿಮಾನಗಳಿಗೆ ಮುಕ್ತಗೊಳಿಸಬಾರದೆಂದು ತೀರ್ಮಾನಕ್ಕೆ ಬಂದಿದ್ದಾರೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸಿವಿಲ್ ಏವಿಯೇಷನ್ ??ಅಥಾರಿಟಿ ವಿಮಾನ ಚಾಲಕರಿಗೆ ಈ ತೀರ್ಮಾನದ ಬಗೆಗೆ ವಿವರಿಸಿದೆ ಎಂದು ಅವರು ಹೇಳಿದ್ದಾರೆ.ಸಭೆಯ ಬಳಿಕ ಪೈಲಟ್ ಗಳಿಗೆ ಈ ಕುರಿತಂತೆ ನೋಟೀಸ್ ಜಾರಿಗೊಳಿಸಲಾಗಿದೆ.
ಮೇ 30ರಂದು ಪಾಕಿಸ್ತಾನಈ ಸಂಬಂಧ ತನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.