ಪೆರ್ಲ:ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತೆರವು ಬಿದ್ದಿರುವ ಅಧ್ಯಾಪಕ ಹುದ್ದೆಗಳಿಗೆ ಮೇ 31ರಂದು(ಇಂದು) ಬೆಳಿಗ್ಗೆ 9.30ಕ್ಕೆ ಸಂದರ್ಶನ ನಡೆಯಲಿದೆ.
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇತಿಹಾಸ, ಸಮಾಜಶಾಸ್ತ್ರ, ಇಂಗ್ಲೀಷ್, ಜೂ.ಅರ್ಥಶಾಸ್ತ್ರ, ಜೂ.ವಾಣಿಜ್ಯ ಶಾಸ್ತ್ರ, ಜೂ.ಹಿಂದಿ ಅಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಕ್ಲಪ್ತ ಸಮಯದಲ್ಲಿ ಶಾಲಾ ಕಚೇರಿಯಲ್ಲಿ ಹಾಜರಿರುವಂತೆ ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.