HEALTH TIPS

ಮುಂದಿನ ಜನಾಂಗವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದುದು ನಮ್ಮ ಕರ್ತವ್ಯ - ಕೃಷ್ಣ ಮಣಿಯಾಣಿ ಪುತ್ತಿಲ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 40ನೇ ವಾರ್ಷಿಕೋತ್ಸವ, ಧಾರ್ಮಿಕಸಭೆ

     
   ಬದಿಯಡ್ಕ: ಭಕ್ತಿ ಮತ್ತು ಪ್ರೀತಿಗೆ ಎಂತಹ ಶತ್ರುಗಳನ್ನು ಎದುರಿಸುವ ಶಕ್ತಿಯಿದೆ. ಮನದಲ್ಲಿ  ಅಚಲವಾದ ನಿಷ್ಠೆ, ಪರಿಶ್ರಮವಿದ್ದರೆ ದೇವರನ್ನು ಕಾಣಬಹುದು. ಪರಂಪರಾಗತವಾಗಿ ಆಚರಿಸಿಕೊಂಡು ಬರುವ ಆಚಾರ ಅನುಷ್ಠಾನಗಳನ್ನು ಉಳಿಸಿ, ಮುಂದಿನ ಜನಾಂಗವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಕರ್ತವ್ಯ ನಮ್ಮ ಪಾಲಿಗಿದೆ ಎಂಬುದನ್ನು ನಾವು ಸದಾ ನೆನಪಿಸನಲ್ಲಿಟ್ಟುಕೊಳ್ಳಬೇಕು ಎಂದು ಧಾರ್ಮಿಕ ಮುಂದಾಳು ಬೆಳ್ತಂಗಡಿ ಪುತ್ತಿಲ ಮೂರುಗೋಳಿಯ ಕೃಷ್ಣ ಮಣಿಯಾಣಿ ಹೇಳಿದರು.
      ಅವರು ಸೋಮವಾರ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 40ನೇ ವಾರ್ಷಿಕೋತ್ಸವದ ಧಾರ್ಮಿಕಸಭೆಯಲ್ಲಿ ಧಾರ್ಮಿಕ ಭಾಷಣಗೈದು ಮಾತನಾಡಿದರು.
     ಮಾನವನಾಗಿ ಹುಟ್ಟಿದ ಮೇಲೆ ಧರ್ಮಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೆ, ನಾವು ಮಾಡುವ ಕರ್ತವ್ಯದಲ್ಲಿ ದೇವರನ್ನು ಕಾಣಬೇಕು. ಎಲ್ಲಾ ಧರ್ಮಗಳಿಗೂ ಹಿರಿಯದಾದ ಸನಾತನ ಧರ್ಮವು ಮನುಕುಲದ ಉದ್ಧಾರಕ್ಕಾಗಿರುವುದಾಗಿದೆ. ಅಂತಹ ಸನಾತನ ಧರ್ಮವನ್ನು ಎತ್ತರಕ್ಕೇರಿಸಿ ಗೌರವವನ್ನು ಉಳಿಸಲು ನಾವು ಮುಂದಡಿಯಿಡಬೇಕು. ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಮೂಲಕ ಮಾತೆಯರು ಮನೆಯನ್ನು ಬೆಳಗುವಲ್ಲಿ ಪ್ರನ ಕಾರಣರಾಗಬೇಕಾಗಿದೆ. ಮನೆಯನ್ನು ಬೆಳಗಿಸುವ ಶಕ್ತಿ ಮಾತೆಗಿದೆ. ದೇವರ ಹೆಸರುಗಳನ್ನು ಮಕ್ಕಳಿಗಿಡುವ ಮೂಲಕ ಮನೆಯಲ್ಲಿ ನಿತ್ಯ ದೇವರ ನಾಮಸ್ಮರಣೆಯನ್ನು ಮಾಡುವಲ್ಲಿ ಹಿರಿಯರು ಮುತುವರ್ಜಿ ವಹಿಸಿದ್ದರು. ಆದರೆ ಇಂದು ನಾವು ಆ ಪರಂಪರೆಯನ್ನು ಮರೆಯುತ್ತಿದ್ದೇವೆ. ಮನೆಯಲ್ಲಿ ಭಜನೆಯ ಮೂಲಕ ದೇವನಾಮಸ್ಮರಣೆ ನಡೆದರೆ ಅಲ್ಲಿ ಸಾತ್ವಿಕ ಶಕ್ತಿ ನೆಲೆಗೊಳ್ಳುತ್ತದೆ. ಗುರುಹಿರಿಯರಿಗೆ ಸದಾ ಗೌರವವನ್ನು ಕಾಣುವ ಮನೆ, ಮನ ನಮ್ಮದಾಗಬೇಕು. ಎಲ್ಲಿ ಗುರುಸಾನ್ನಿಧ್ಯವಿರುವುದೋ ಅಲ್ಲಿ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ. ಬಡಜನರ ಸೇವೆಗೈಯುವ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
      ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮಂದಿರದ ಸಲಹಾಸಮಿತಿ ಸದಸ್ಯ ರಾಮಚಂದ್ರ ಭಟ್ ಉಪ್ಪಂಗಳ, ಕೆ.ವಿ.ರಮೇಶ ಶರ್ಮ ಕುರುಮುಜ್ಜಿ ಶುಭಾಶಂಸನೆಗೈದರು. ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಕುಂಞÂರಾಮ ನಾರಾಯಣ ಮಣಿಯಾಣಿ ಮಾರ್ಪನಡ್ಕ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ಅಚ್ಚುತ ಮಾಸ್ತರ್ ಅಗಲ್ಪಾಡಿ ವಾರ್ಷಿಕ ವರದಿ ಮಂಡಿಸಿದರು. ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು ಶ್ರೀಕ್ಷೇತ್ರ ಧರ್ಮಸ್ಥಳದ ಸಂದೇಶವನ್ನು ವಾಚಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ ಮಾರ್ಪನಡ್ಕ ಇವರನ್ನು ಸನ್ಮಾನಿಸಲಾಯಿತು. ದಿ. ಗೋಪಾಲ ಮಾಸ್ತರ್ ಪದ್ಮಾರು ಇವರ ಸ್ಮರಣಾರ್ಥ 2017-18ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾಸರಗೋಡು ತಾಲೂಕು ಯಾದವ ಸಮುದಾಯದ ವಿದ್ಯಾರ್ಥಿಗಳಾದ ಕು. ಸೌಮ್ಯ ಎನ್., ನಂದು ಕೃಷ್ಣ ಆರ್.ವೈ., ಕು. ಅನಘ ಕೆ.ರಾಮನ್ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಗೋಪಾಲಕೃಷ್ಣ ಭಜನಾ ಮಂದಿರದ ಯುವವಿಭಾಗದ ವತಿಯಿಂದ ಪಾತ್ರೆ ಸಮರ್ಪಣೆ, ಭಜನಾ ಸಂಘದವರಿಂದ ಹಾರ್ಮೋನಿಯಂ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಯಾದವ ಸೇವಾ ಸಂಘದ ಪ್ರ.ಕಾರ್ಯದರ್ಶಿ ನಾರಾಯಣ ಪದ್ಮಾರು ವಂದಿಸಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ನಿರೂಪಿಸಿದರು. ಕು. ಮಾನಸ ಕಲ್ಲಕಟ್ಟ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಅರುಣೋದಯ ಕಾಲದಲ್ಲಿ ಧ್ವಜಾರೋಹಣ, ಬೆಳಿಗ್ಗೆ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಮಹಾಮಹೋಪಾಧ್ಯಾಯ ಬಳ್ಳಪದವು ಮಾಧವ ಉಪಾಧ್ಯಾಯ ಇವರ ನೇತೃತ್ವದಲ್ಲಿ ಶುದ್ಧಿ ಕಲಶ, ಗಣಪತಿಹವನ, ಲಹರಿ ಭಜನಾ ಸಂಘ ಪೆರ್ಲ ಇವರಿಂದ ಭಜನೆ, ಚಪ್ಪರ ಮದುವೆ ಜರಗಿತು.
     ಅಪರಾಹ್ನ ನಮಸ್ತೇ ಇಂಡಿಯಾ ಬೆಂಗಳೂರು ಪ್ರಾಯೋಜಕತ್ವದಲ್ಲಿ ಕೃಷ್ಣಾನಂದ ಶರ್ಮ ಉಪ್ಪಂಗಳ ಇವರಿಂದ ಕೊಳಲು ವಾದನ ಸಂಗೀತ ಕಛೇರಿ, ಗ್ರಾಮ ವಿಕಾಸ ಸಂಗೀತ ತರಬೇತಿ ಕೇಂದ್ರ ಉಬ್ರಂಗಳ ಇವರಿಂದ ಸಂಗೀತಾರ್ಚನೆ. ಸಂಜೆ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ ಮಹಾಪೂಜೆ, ಕು. ಮಾನಸ ಹಾಗೂ ಕು. ವೈಷ್ಣವಿ ಕಲ್ಲಕಟ್ಟ ಇವರಿಂದ ಪೂಜಾನೃತ್ಯ ಜರಗಿತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲದ ಗುರುಗಳಾದ ಸಬ್ಬಣಕೋಡಿ ರಾಮ ಭಟ್ ನಿರ್ದೇಶನದಲ್ಲಿ ಶ್ರೀ ದುರ್ಗಾಕೃಷ್ಣ ಮಕ್ಕಳ ಮೇಳ ಅಗಲ್ಪಾಡಿ ಜಯನಗರ ಇವರಿಂದ ರಂಗಪ್ರವೇಶ, ಯಕ್ಷಗಾನ ಪ್ರದರ್ಶನ `ಶ್ರೀಕೃಷ್ಣ ಚರಿತಾಮೃತ' ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries