ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಕಾಸರಗೋಡು ಬ್ಲಾಕ್ ಪಂಚಾಯತ್‍ನ ಬದಿಯಡ್ಕ ಹುಡುಗರ ಪ್ರೀಮೆಟ್ರಿಕ್ ಹಾಸ್ಟೆಲ್‍ನಲ್ಲಿ ಕಾಸರಗೋಡು ನಗರಸಭೆಯ ವಿದ್ಯಾನಗರ ಹುಡುಗರ, ಅಣಂಗೂರಿನ ಹುಡುಗಿಯರ ಪ್ರೀಮೆಟ್ರಿಕ್ ಹಾಸ್ಟೆಲ್‍ಗಳಲ್ಲಿ ಹೆಚುವರಿ 40 ಮಂದಿ ವಿದ್ಯಾರ್ಥಿಗಳಿಗೆ ನೂತನ ಶಿಕ್ಷಣ ವರ್ಷದಲ್ಲಿ ಪ್ರವೇಶಾತಿ ನೀಡಲಾಗುವುದು. ಈ ಸಂಬಂಧ ಮೇ 25ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 29 ಮಂದಿ ಹುಡುಗರಿಗೆ ಮತ್ತು 11 ಮಂದಿ ಹುಡುಗಿಯರಿಗೆ ಈ ಮೂಲಕ ಅವಕಾಶ ಲಭಿಸಲಿದೆ.
2019-20 ಶೈಕ್ಷಣಿಕ ವರ್ಷದಲ್ಲಿ 5ರಿಂದ 10ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿಯ ಮಂದಿಯ ಅಭಾವವಿದ್ದಲ್ಲಿ ಪರಿಶಿಷ್ಟ ಪಂಗಡದವರನ್ನು ಪರಿಶೀಲಿಸಲಾಗುವುದು. ಕೆಲವು ಸೀಟುಗಳನ್ನು ಉಳಿದ ಜನಾಂಗದವರಿಗೂ ಇದೆ.
ಇಲ್ಲಿ ಭೋಜನ - ವಸತಿ - ಕಲಿಕೆ ಉಚಿತವಾಗಿದೆ. ಪ್ರತಿ ತಿಂಗಳು 280 ರೂ. ಪಾಕೆಟ್ ಮನಿಯೂ ಲಭಿಸಲಿದೆ. ಉತ್ತಮ ಶಿಕ್ಷಕರ ಮೂಲಕ ಟ್ಯೂಷನ್ ಒದಗಿಸಲಾಗುವುದು. ಕಲಾ-ಕ್ರೀಡಾ ಸಾಮಥ್ರ್ಯ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಪ್ರತ್ಯೇಕ ವ್ಯವಸ್ಥೆಗಳೂ ಇಲ್ಲಿವೆ. ಸಮವಸ್ತ್ರ, ರಾತ್ರಿಯುಡುಪು ಇತ್ಯಾದಿಗಳ ವೆಚ್ಚವನ್ನೂ ಇಲಾಖೆಯೇ ವಹಿಸಿಕೊಳ್ಳಲಿದೆ. ಹಾಸ್ಟೆಲ್ ಬಳಿಯೇ ಇರುವ ಶಿಕ್ಷಣಾಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯೂ ನಡೆಯುತ್ತದೆ. ವಿದ್ಯಾನಗರದ ಸ್ಕೌಟ್ ಭವನದ ಬಳಿಯ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಅರ್ಜಿ ಫಾರಂ ಲಭಿಸಲಿದೆ.