ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವ ಮೇ 4 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಬನಾರಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಸಂಜೆ 4.15 ರಿಂದ ಆರಂಭಗೊಳ್ಳುವ ಸಭಾ ಕಾರ್ಯಕ್ರಮದಲ್ಲಿ ಪೆÇ್ರ.ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸುವರು. ಡಾ.ರಮಾನಂದ ಬನಾರಿ ಮಂಜೇಶ್ವರ ಅವರ `ಹಾರಿ ಹೋದ ಹಕ್ಕಿಗಳು' ಕೃತಿಯನ್ನು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಬಿಡುಗಡೆಗೊಳಿಸುವರು. ಡಾ.ಬಿ.ಪ್ರಭಾಕರ ಶಿಶಿಲ ಕೃತಿಯ ಕುರಿತು ಅವಲೋಕನ ನಡೆಸಲಿದ್ದಾರೆ.
ಗುರು ಬಿ.ಗೋಪಾಲಕೃಷ್ಣ ಕುರುಪ್ ಶಿಶಿಲ, ಉಜಿರೆ ಅಶೋಕ್ ಭಟ್, ಎ.ನಾರಾಯಣ ನಾೈಕ್ ಊಜಂಪಾಡಿ, ನಾರಾಯಣ ದೇಲಂಪಾಡಿ, ಚಂದ್ರಶೇಖರ ಏತಡ್ಕ ಮೊದಲಾದವರು ಉಪಸ್ಥಿತರಿರುವರು.