ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ಬೆನ್ನಲ್ಲೆ, ಮತ್ತೋರ್ವ ಭಯೋತ್ಪಾದಕ ಹಫೀಜ್ ಸಯೀದ್ ಗೆ ಸೇರಿದ್ದ 70 ಲಕ್ಷ ರೂಪಾಯಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
ಪಾಕಿಸ್ತಾನ ಮೂಲದ ಫಲಾಹ್-ಎ-ಇನ್ಸಾನಿಯತ್ ಉಗ್ರ ಸಂಘಟನೆ ಹಾಗೂ ಹಫೀಸ್ ಮುಹಮ್ಮದ್ ಸಯೀದ್ ಗೆ ಸೇರಿದ ಹಣ ವರ್ಗಾವಣೆ ಪ್ರಕರಣದಲ್ಲಿ 73 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತಿದ್ದು, ಭಯೋತ್ಪಾದನೆಗೆ ಬಳಕೆಯಾಗಬೇಕಿದ್ದ ಒಟ್ಟಾರೆ 212 ಕೋಟಿ ರೂಪಾಯಿಗಳನ್ನು ಕಳೆದ 5 ತಿಂಗಳಲ್ಲಿ ವಶಪಡಿಸಿಕೊಂಡಿದ್ದು 13 ಚಾರ್ಜ್ ಶೀಟ್ ದಾಖಲಿಸಿದೆ.