ಕಾಸರಗೋಡು: ಕೊರಕೋಡು ಆರ್ಯಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಮೇ 5 ರಿಂದ 9 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಫಲರಾಶಿ ಪೂಜಾ ಮಹೋತ್ಸವ ಮತ್ತು ಮೇ 8 ರಂದು ಬ್ರಹ್ಮಕಲಶದ ವಾರ್ಷಿಕೋತ್ಸವ ಜರಗಲಿದೆ.
ಮೇ 5 ರಂದು ಪೂರ್ವಾಹ್ನ ಭಂಡಾರ ಮನೆಯಿಂದ ಭಂಡಾರ ಹೊರಡುವುದು, ಧ್ವಜಾರೋಹಣ, ಉತ್ಸವ ಪ್ರಾರಂಭ, ಮಧ್ಯಾಹ್ನ 1 ಕ್ಕೆ ಪೂಜೆ, ದರ್ಶನ, ರಾತ್ರಿ ಪೂಜೆ, 6 ರಂದು ಶಿವಾಜಿ ಜಯಂತಿ, ಬೆಳಿಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಪ್ರತಿಷ್ಠೆ, ಭಜನೆ, ಮಧ್ಯಾಹ್ನ 1 ಕ್ಕೆ ಪೂಜೆ, ರಾತ್ರಿ ಪೂಜೆ ನಡೆಯುವುದು.
ಮೇ 7 ರಂದು ಮಧ್ಯಾಹ್ನ 1 ಕ್ಕೆ ಪೂಜೆ, ರಾತ್ರಿ 9 ಕ್ಕೆ ಪೂಜೆ, ವಸಂತೋತ್ಸವ, 8 ರಂದು ಸೂರ್ಯೋದಯಕ್ಕೆ ಭಜನೆ ಪ್ರಾರಂಭ, ಮಧ್ಯಾಹ್ನ 1 ಕ್ಕೆ ಮಹಾಪೂಜೆ, ದರ್ಶನ, ರಾತ್ರಿ 9 ಕ್ಕೆ ಪೂಜೆ, ದರ್ಶನ, 12 ಕ್ಕೆ ಫಲರಾಶಿ ಪೂಜಾ ಮಹೋತ್ಸವ, 9 ರಂದು ಸಂಜೆ 6 ಕ್ಕೆ ಮಹಾಪೂಜೆ, ದರ್ಶನ, ರಥೋತ್ಸವ, ಭಂಡಾರ ನಿರ್ಗಮನ ನಡೆಯಲಿದೆ.
ಮೇ 8 ರಂದು ಮಧ್ಯಾಹ್ನ 12 ಕ್ಕೆ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ವಾರ್ಷಿಕೋತ್ಸವ, ಮಹಾಪೂಜೆ, ದರ್ಶನ, ರಾತ್ರಿ 9 ಕ್ಕೆ ಪೂಜೆ, ದರ್ಶನ ನಡೆಯುವುದು.