ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ಮೇ.5ರಂದು ಶ್ರೀ ಮಹಿಷಮರ್ದಿನೀ ಭಜನ ಸಂಘದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸಂಘಗಳಿಂದ ಭಜನೆ ನಡೆಯಲಿದೆ. ಅಂದು ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ದೀಪಪ್ರತಿಷ್ಠೆ, ಭಜನೆ ಆರಂಭ, 7.30ಕ್ಕೆ ಉಷಃಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ, ರಾತ್ರಿ ಶ್ರೀ ದೇವಿಗೆ ವಿಶೇಷ ಕಾರ್ತಿಕ ಪೂಜೆ ಜರಗಲಿದೆ. ಶ್ರೀ ಮಹಿಷಮರ್ಧಿನಿ ಭಜನ ಸಂಘ , ಶ್ರೀ ಚೀರುಂಬಾ ಭಜನ ಸಂಘ ಪೊಡಿಪ್ಪಳ್ಳ, ಶ್ರೀರಾಮಾಂಜನೇಯ ಭಜನ ಸಂಘ, ಕುದಿಂಗಿಲ, ಶ್ರೀ ಗೋಪಾಲಕೃಷ್ಣ ಭಜನ ಸಂಘ ಮಾರ್ಪನಡ್ಕ-ಜಯನಗರ, ಶ್ರೀದುರ್ಗಾಪರಮೇಶ್ವರಿ ಭಜನ ಸಂಘ ಏತಡ್ಕ, ಶ್ರೀ ಧರ್ಮಶಾಸ್ತಾ ಭಜನ ಸಂಘ ಉಬ್ರಂಗಳ, ಶ್ರೀ ವಿಶ್ವಪ್ರಿಯ ಭಜನ ಸಂಘ ಏತಡ್ಕ ವಲಯ, ಶ್ರೀ ಕೃಷ್ಣ ಭಜನ ಸಂಘ ಮವ್ವಾರು, ಶ್ರೀ ಸಿದ್ಧಿವಿನಾಯಕ ಭಜನ ಸಂಘ ಕಜೆ, ಶ್ರೀ ಅಯ್ಯಪ್ಪ ಸ್ವಾಮಿ ಭಜನ ಸಂಘ ಮಾವಿನಕಟ್ಟೆ, ಶ್ರೀ ಸದಾಶಿವ ಭಜನ ಸಂಘ ಬೊಳ್ಳೂರು, ಶ್ರೀ ಧರ್ಮಶಾಸ್ತಾ ಭಜನ ಸಂಘ ಕುರುಮುಜ್ಜಿಕಟ್ಟೆ, ಶ್ರೀ ಮಹಾವಿಷ್ಣು ಭಜನ ಸಂಘ ಆಲಿಂಜ ಬೆಳಿಂಜ, ಶ್ರೀ ವಿಶ್ವಕರ್ಮ ಭಜನ ಸಂಘ ಮವ್ವಾರು, ಶ್ರೀ ಮಹಿಷಮರ್ಧಿನಿ ಮಹಿಳಾ ಭಜನ ಸಂಘ ಗೋಸಾಡ ಸೂರ್ಯೋದಯದಿಂದ ರಾತ್ರಿ ಮಹಾಪೂಜೆ ತನಕ ಭಜನ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.