ನವದೆಹಲಿ: ಫೆಬ್ರವರಿಯಿಂದ ಮೇ ಮಧ್ಯೆ ಗೂಗಲ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತಿಗಾಗಿ ರಾಜಕೀಯ ಪಕ್ಷಗಳು 53 ಕೋಟಿ ರೂಪಾಯಿಯನ್ನು ವೆಚ್ಚ ಮಾಡಿವೆ. ಈ ವೆಚ್ಚದಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ.
ಫೇಸ್ ಬುಕ್ ಜಾಹಿರಾತು ಲೈಬ್ರರಿ ವರದಿ ಪ್ರಕಾರ, ಈ ವರ್ಷದ ಫೆಬ್ರವರಿಯಿಂದ ಮೇ ನಡುವಿನ ಅವಧಿಯಲ್ಲಿ 1. 21 ಲಕ್ಷ ರಾಜಕೀಯ ಜಾಹಿರಾತಿಗಾಗಿ 26.5 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಗೂಗಲ್, ಯೂ ಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಫೆಬ್ರವರಿ 19 ರಿಂದಲೂ 14, 837 ಜಾಹಿರಾತಿಗಾಗಿ 27. 36 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗಿದೆ.
ಆಡಳಿತಾರೂಢ ಬಿಜೆಪಿ 25000 ಫೇಸ್ ಬುಕ್ ಜಾಹಿರಾತಿಗಾಗಿ 4. 23 ಕೋಟಿ ರೂ. ವೆಚ್ಚ ಮಾಡಿದೆ. ಮೈ ಪಸ್ಟ್ ವೋಟ್ ಪಾರ್ ಮೋದಿ, ಭಾರತ್ ಕೆ ಮನ್ ಕಿ ಬಾತ್, ನೇಷನ್ ವಿಥ್ ನಮೋ ಟೂ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತಿಗಾಗಿ 4 ಕೋಟಿ ವೆಚ್ಚ ಮಾಡಲಾಗಿದೆ.ಗೂಗಲ್ ನಲ್ಲಿ ಜಾಹಿರಾತಿಗಾಗಿ 17 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷ ಫೇಸ್ ಬುಕ್ ನಲ್ಲಿ 3,686 ಜಾಹಿರಾತಿಗಾಗಿ 1.46 ಕೋಟಿ ವೆಚ್ಚ ಮಾಡಿದೆ. ಗೂಗಲ್ ವೇದಿಕೆಯಲ್ಲಿ 425 ಜಾಹಿರಾತಿಗಾಗಿ 2. 71 ಕೋಟಿ ರೂ. ವೆಚ್ಚ ಮಾಡಿದೆ. ಟಿಎಂಸಿ 29.28 ಲಕ್ಷ , ಎಎಪಿ 176 ಫೇಸ್ ಬುಕ್ ಜಾಹಿರಾತಿಗಾಗಿ 13. 62 ಲಕ್ಷ , ಗೂಗಲ್ ನಲ್ಲಿನ ಜಾಹಿರಾತಿಗಾಗಿ 2.18 ಕೋಟಿ ವೆಚ್ಚ ಮಾಡಿದೆ ಎಂಬುದು ತಿಳಿದುಬಂದಿದೆ.