ಕಾಸರಗೋಡು: "ವಾಯುಮಾಲಿನ್ಯ ವಿರುದ್ಧ ಕೈಜೋಡಿಸೋಣ" ಎಂಬ ಸಂದೇಶದೊಂದಿಗೆ ಈ ವರ್ಷದ ವಿಶ್ವಪರಿಸರ ದಿನಾಚರಣೆ ನಡೆಯಲಿದ್ದು, ಇದರ ಅಂಗವಾಗಿ ಜಿಲ್ಲಾಮಟ್ಟದ ಕಾರ್ಯಕ್ರಮ ಜೂ.5ರಂದು ಕಾಂಞÂರಪ್ಪೊಯಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಮಡಿಕೈ ಗ್ರಾಮ ಪಂಚಾಯತ್, ಜಿಲ್ಲಾ ಸಮಾಜ ಅರಣ್ಯೀಕರಣ ವಿಭಾಗ, ಹರಿತ ಕೇರಳ ಮಿಷನ್, ಜೈವ ವೈವಿಧ್ಯ ಮಂಡಳಿ, ಎಂ.ಜಿ.ಆರ್.ಇ.ಜಿ., ಕುಟುಂಬಶ್ರೀ ಗಳ ಜಂಟಿ ವತಿಯಿಂದ ಸಮಾರಂಭ ಜರುಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು.
ಸಮಾರಂಭ ಅಂಗವಾಗಿ ಹಲಸು ಉತ್ಸವ ನಡೆಯಲಿದ್ದು, ಮಾಜಿ ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ಸಿನಿಮಾ ಪ್ರದರ್ಶನವನ್ನು ಜಿಲ್ಲ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಕುದುರು ಸಂರಕ್ಷಣೆ ಯೋಜನೆಯ ಉದ್ಘಾಟನೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ನಕ್ಷತ್ರವನ ಯೋಜನೆಯನ್ನು ಕಾಞÂಂಗಾಡ್
ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಔಷಧ ತೋಟ ಯೋಜನೆಯನ್ನು ಮಡಿಕೈ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಉದ್ಘಾಟಿಸುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು.