HEALTH TIPS

ಇಂದು 6ನೇ ಹಂತದ ಮತದಾನ: ದಿಲ್ಲಿ ಬಿಜೆಪಿಗೆ ಪ್ರತಿಷ್ಠೆ, ಆಪ್ ಗೆ ಉಳಿವಿನ ಪ್ರಶ್ನೆ, ಮತ್ತೆ ಪ್ರಾಬಲ್ಯ ಸಾಧಿಸಲು ಕೈ ಯತ್ನ

         
      ನವದೆಹಲಿ: ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳು ಸೇರಿದಂತೆ ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು(ಭಾನುವಾರ) 6ನೇ ಹಂತದ ಮತದಾನ ಆರಂಭವಾಗಿದ್ದು,  ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷ, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ರಾಜಕೀಯ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
     ದಿಲ್ಲಿಯ 1.4 ಕೋಟಿ ಮತದಾರರು ಏಳು ಕ್ಷೇತ್ರಗಳ ಲೋಕಸಭಾ ಸದಸ್ಯರನ್ನು ಚುನಾಯಿಸಲಿದ್ದಾರೆ. ಪ್ರಚಾರದ ವೇಳೆ ಏಟು-ತಿರುಗೇಟು, ಬೈಗುಳ- ಪ್ರತಿಬೈಗುಳ, ವೈಯಕ್ತಿಕ ನಿಂದನೆಗಳು ಕೂಡ ಸಾಕಷ್ಟು ಕೇಳಿಬಂದವು. ಆಪ್ ಮಹಿಳಾ ಅಭ್ಯರ್ಥಿ ವಿರುದ್ಧ ಅವಹೇಳನಕಾರಿ ಕರಪತ್ರ ವಿವಾದವೂ ಭುಗಿಲೆದ್ದಿತು.
    ದಿಲ್ಲಿಯ ಚುನಾವಣಾ ಕಣ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, 2014ರಲ್ಲಿ ಮೋದಿ ಅಲೆಯಲ್ಲಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಗೆದ್ದು ಬೀಗಿತ್ತು. ಕೇಸರಿ ಪಡೆ ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಲಾಭ ಪಡೆದು ಏಳು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.
    ಆಡಳಿತರೂಢ ಎಎಪಿಗೆ ಈ ಲೋಕಸಭೆ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, 2015ರಲ್ಲಿ ನಡೆದ ದೆಹಲಿ ವಿಧಾನಸಭೆ ಚುವಾವಣೆಯಲ್ಲಿ 70 ಸ್ಥಾನಗಳ ಪೈಕಿ 67ರಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿತ್ತು.
     2014ರಲ್ಲಿ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದ ಕಾಂಗ್ರೆಸ್ ಈಗ ಕಳೆದುಕೊಂಡ ಕ್ಷೇತ್ರಗಳನ್ನು ಮರಳಿ ಪಡೆಯುವ ಯತ್ನದಲ್ಲಿದೆ.
ನಾಲ್ಕು ವರ್ಷಗಳಿಂದ ಸ್ವತಂತ್ರ ಆಡಳಿತಕ್ಕಾಗಿ ಕೇಂದ್ರದ ಜತೆ ಸಂಘರ್ಷದಲ್ಲೇ ಕಳೆದ ಆಮ್ ಆದ್ಮಿ ಪಕ್ಷ ತನ್ನ ಪ್ರಾಬಲ್ಯವನ್ನು ಮತ್ತೆ ಸಾಬೀತುಪಡಿಸಲು ಹವಣಿಸುತ್ತಿದೆ. ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್, ಕಾಂಗ್ರೆಸ್‍ನ ಶೀಲಾ ದೀಕ್ಷಿತ್ ಹಾಗೂ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಈ ಚುನಾವಣೆಗೆ ತಾರಾ ಮೌಲ್ಯ ತಂದುಕೊಟ್ಟಿರುವುದಷ್ಟೇ ಅಲ್ಲ, ದಿಗ್ಗಜಗಳ ನಡುವಿನ ಸೆಣಸಾಟವನ್ನೂ ತಂದಿಟ್ಟಿದ್ದಾರೆ.
    ದೇಶದಲ್ಲಿ ಈಗಾಗಲೇ ಐದು ಹಂತದ ಮತದಾನ ಪೂರ್ಣಗೊಂಡಿದ್ದು,ಇಂದು ಏಳು ರಾಜ್ಯಗಳಲ್ಲಿ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೇ 19ರಂದು ಕೊನೆಯ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ. ಇದೇ ತಿಂಗಳ ಮೇ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries