ಕಾಸರಗೋಡು: ವಿದ್ಯಾನಗರದ ಚಿನ್ಮಯ ಮಿಷನ್‍ನ ನೇತೃತ್ವದಲ್ಲಿ ವಿದ್ಯಾನಗರದ ಚಿನ್ಮಯ ಜನ್ಮಶತಾಬ್ಧಿ ಹಾಲ್‍ನಲ್ಲಿ ಮೇ 7, 8 ಮತ್ತು 9 ರಂದು ಚಿನ್ಮಯೋತ್ಸವ ಮತ್ತು ವೈಭವತ್ರಯ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 7 ರಂದು ಬೆಳಗ್ಗೆ 9.30 ರಿಂದ ರಿಜಿಸ್ಟ್ರೇಶನ್, ದೀಪ ಬೆಳಗುವಿಕೆ, ಮಂತ್ರೋಚ್ಛಾರಣೆ, ಚಿನ್ಮಯ ವಿದ್ಯಾಲಯ ಭಜನಾ ಸಂಘದಿಂದ ಭಜನೆ, ಗುರುದೇವ ಅಷ್ಟೋತ್ತರ ಅರ್ಚನೆ, 11 ಗಂಟೆಗೆ ಪೂಜ್ಯ ವಿವಿಕ್ತಾನಂದ ಸರಸ್ವತಿಜೀ ಅವರು ಉದ್ಘಾಟಿಸುವರು. ತಳಿಪರಂಬ ಚಿನ್ಮಯ ಮಿಷನ್‍ನ ಕೆ.ವಿ.ಮುಖೇಶ್ ಭಾರತೀಯ ಸಂಸ್ಕøತಿ ಬಗ್ಗೆ ಉಪನ್ಯಾಸ ನೀಡುವರು. ಆ ಬಳಿಕ ಪ್ರಶ್ನೋತ್ತರ, ಚಿನ್ಮಯ ರಶ್ಮಿ ವಿಶೇಷಾಂಕ ಬಿಡುಗಡೆ, ಸ್ವಸ್ತಿ ಮಂತ್ರ, ಸಮಾರೋಪ, 1.30 ಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಮೇ 8 ರಂದು ಬೆಳಗ್ಗೆ 9 ಕ್ಕೆ ರಿಜಿಸ್ಟ್ರೇಶನ್, 9.30 ಕ್ಕೆ ಪಾರಾಯಣಗಳು, ಭಜನೆ, ಗೀತಾ ಪಾರಾಯಣ, 11 ಗಂಟೆಗೆ ಸಂಸ್ಮರಣೆ ಸಮಾರಂಭ ನಡೆಯಲಿದ್ದು, ಎ.ಕೆ.ನಾಯರ್ ಅಧ್ಯಕ್ಷತೆ ವಹಿಸುವರು. ಸ್ವಾಮಿ ವಿವಿಕ್ತಾನಂದ ಸರಸ್ವತಿಜೀ ಅವರು ಪ್ರಾಸ್ತಾವಿಕ ಭಾಷಣ ಮಾಡುವರು.11.30 ರಿಂದ ಸ್ವಾಮಿ ಚಿನ್ಮಯಾನಂದರೂ ಭಗವದ್ಗೀತೆಯೂ ಎಂಬ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ದೇಶಕ ಸಮಿತಿಯ ಡಾ|ಪಿ.ವಿ.ಕೃಷ್ಣನ್ ನಾಯರ್ ಉಪನ್ಯಾಸ ನೀಡುವರು. 12.15 ಕ್ಕೆ ಪಾದುಕ ಪೂಜೆ, ಸ್ವಸ್ತಿ ಮಂತ್ರ, ಚಿನ್ಮಯ ಪ್ರತಿಜ್ಞೆ, 12.30 ಕ್ಕೆ ಅನ್ನಪ್ರಸಾದ ವಿತರಣೆ ಜರಗಲಿದೆ.
ಮೇ 9 ರಂದು ಬೆಳಿಗ್ಗೆ 9.30 ಕ್ಕೆ ರಿಜಿಸ್ಟ್ರೇಶನ್, 10.30 ಕ್ಕೆ ಪಾರಾಯಣಗಳು, ಭಜನೆ, ಆದಿಶಂಕರ ಅಷ್ಟೋತ್ತರ ಅರ್ಚನೆ, 11 ರಿಂದ ಶ್ರೀ ಶಂಕರ ಸಂಸ್ಮರಣೆ, ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀ ಅವರಿಂದ ಭಾಷಣ, 11.30 ರಿಂದ ಭಜಗೋವಿಂದಂ, ಮಧ್ಯಾಹ್ನ 12.15 ಕ್ಕೆ ವೀಡಿಯೋ ಪ್ರದರ್ಶನ, 12.30 ಕ್ಕೆ ವಿದ್ಯಾರಶ್ಮಿ ಪಠನ ಸಹಾಯ ವಿತರಣೆ, 1 ಕ್ಕೆ ಸ್ವಸ್ತಿ ಮಂತ್ರ, ಅನ್ನಪ್ರಸಾದ ವಿತರಣೆ ನಡೆಯಲಿದೆ.