ಪುಣೆ: ಬೇಸಿಗೆ ಕಾಲದಲ್ಲಿ ವಿದ್ಯುತ್ ಇಲ್ಲದೇ ಎಷ್ಟು ದಿನ ಅಥವಾ ಎಷ್ಟು ವಾರ ನೀವು ಇರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇದಕ್ಕೆ ಉತ್ತರ ಇಲ್ಲ ಎಂಬುದಾಗಿದೆ.
ಪುಣೆಯ ಬುದ್ವಾರ್ ನಲ್ಲಿರುವ ನಿವೃತ್ತ ಪ್ರೊಫೆಸರ್ ಡಾ. ಹೇಮಾ ಸಾಣೆ ಬರೋಬ್ಬರಿ 79 ವರ್ಷ ತಮ್ಮ ಮನೆಯಲ್ಲಿ ವಿದ್ಯಚ್ಛಕ್ತಿಯಿಲ್ಲದೇ ಜೀವನ ಪೂರೈಸಿದ್ದಾರೆ, ಪರಿಸರ ಪ್ರೇಮಿಯಾಗಿರುವ ಇವರು ವಿದ್ಯುತ್ ಬಳಸದಿರಲು ನಿರ್ಧರಿಸಿದ್ದಾರೆ.
ಮನೆ, ಊಟ, ಬಟ್ಟೆ ಮೂಲಕಭೂತ ಆದ್ಯತೆ, ಮೊದಲಿಗೆ ವಿದ್ಯುಚ್ಛಕ್ತಿ ಇರಲಿಲ್ಲ, ಆಮೇಲೇ ಬಂತು, ಕರೆಂಟ್ ಇಲ್ಲದೇ ಬದುಕುವುದನ್ನು ಕಲಿತೆ ಎಂದು ಅವರು ಹೇಳಿದ್ದಾರೆ.
ತಮ್ಮ ಆಸ್ತಿ ಮತ್ತು ಮನೆ ತಮ್ಮ ನಂತರ ತಾವು ಸಾಕಿರುವ ನಾಯಿ, ಎರಡು ಬೆಕ್ಕು, ಮುಂಗುಸಿ ಹಾಗೂ ಪಕ್ಷಿಗಳಿಗೆ ಸೇರಬೇಕು ಎಂದು ಹೇಳಿದ್ದಾರೆ. ಈ ಆಸ್ತಿ ನನ್ನದಲ್ಲ, ಅವುಗಳನ್ನು ನೋಡಿಕೊಳ್ಳಲು ನಾನು ಇಲ್ಲಿದ್ದೇನೆ ಎಂದು ಹೇಳಿದ್ದಾರೆ.
ನಾನೊಬ್ಬಳು ದಡ್ಡಿ ಎಂದು ಕರೆಯುತ್ತಾರೆ, ನಾನು ಹುಚ್ಚಿಯೇ ಇರಬಹುದು, ನಾನು ಬದುಕಿರುವ ರೀತಿ ನನಗಿಷ್ಟ. ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್ ಡಿ ಮಾಡಿರುವ ಹೇಮಾ ಸಾಣೆ, ಪುಣೆಯ ಬುಧವಾರಪೇಟೆಯ ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ,
ಮನೆ ಸುತ್ತ ಬಗೆ ಬಗೆಯ ಮರಗಿಡಗಳು, ಪಕ್ಷಿಗಳು ಇವೆ, ಕಳೆದ 79 ವರ್ಷದಿಂದ ಎಲೆಕ್ಟ್ರಿಸಿಟಿ ಬಳಸದೇ ಜೀವಿನಿಸಿದ್ದೀನಿ, ಎಲ್ಲರು ನನ್ನನ್ನ ಕೇಳುತ್ತಾರೆ, ನಾನು ಯಾರಿಗೂ ಯಾವ ಸಂದೇಶ ನೀಡಲು ಬಯಸುವುದಿಲ್ಲ, ನನಗೆ ಪರಿಸರ ಮಾತ್ರ ಮುಖ್ಯ ಎಂದು ಹೇಳಿದ್ದಾರೆ.