ಮಂಜೇಶ್ವರ: ಪಾವೂರು ತಚ್ಚಿರೆ ಸ್ವಾಮಿ ಕೊರಗತನಿಯ ದೈವದ ಸಾನಿಧ್ಯದ ಪುನರ್‍ಪ್ರತಿಷ್ಠಾ ಕಲಶಾಭಿಷೇಕ ಮತ್ತು ಕೊರಗತನಿಯ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ಜೂ.8 ಮತ್ತು 9 ರಂದು ನಡೆಯಲಿದೆ.
ಜೂ.8 ರಂದು ಸಂಜೆ 5 ಕ್ಕೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, 6 ಕ್ಕೆ ಸ್ಥಳ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ, ರಕ್ಷೋಘ್ನ ಹೋಮ, ಜೂ.9 ರಂದು ಬೆಳಿಗ್ಗೆ 9 ಕ್ಕೆ ಗಣಹೋಮ, 11.07 ಕ್ಕೆ ಸ್ವಾಮೀ ಕೊರಗತನಿಯ ದೈವದ ಪುನರ್‍ಪ್ರತಿಷ್ಠಾ ಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ, ಸಂಜೆ 7 ಕ್ಕೆ ಸ್ವಾಮೀ ಕೊರಗತನಿಯ ದೈವದ ಕೋಲ, ರಾತ್ರಿ 9.30 ಕ್ಕೆ ಅನ್ನಸಂತರ್ಪಣೆ ನಡೆಯುವುದು.