HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಲಸು ಮೇಳ ಜೂ.8 ಕ್ಕೆ

      ಬದಿಯಡ್ಕ: ಹಲಸು ಬೆಳೆಸಿ ಗೋವು ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜೂನ್ 8 ರಮದು ಜರಗಲಿರುವ " ಹಲಸು ಮೇಳ " ಎಂಬ ಬೃಹತ್ ಸಮಾರಂಭದ ಸಿದ್ಧತೆಗಾಗಿ ಸಮಾಲೋಚನಾ ಸಭೆಯು ವಿದ್ಯಾಪೀಠದಲ್ಲಿ ಇತ್ತೀಚೆಗೆ ಜರಗಿತು. ಮುಳ್ಳೇರಿಯಾ ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ  ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
     ಸಮಾರಂಭವು ಮುಳ್ಳೇರಿಯಾ  ಹವ್ಯಕ ಮಂಡಲ,  ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ ಮತ್ತು ಮಹಿಳೋದಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಲಿದೆ. ಸಭೆಯಲ್ಲಿ ಡಾ. ವೈ.ವಿ. ಕೃಷ್ಣಮೂರ್ತಿ ಅವರು ಕಾರ್ಯಕ್ರಮದ  ಸಮಗ್ರ  ಕಾರ್ಯಯೋಜನೆಯ ಮಾಹಿತಿಯನ್ನಿತ್ತರು.  ಮಂಡಲ  ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅವರು ಕಾರ್ಯಕ್ರಮ ಸಂಯೋಜನೆ ಮಾಡಿ ಸಭಾ ನಿರೂಪಣೆ ಮಾಡಿದರು.
   ಕಾರ್ಯಕ್ರಮದ ಯಶಸ್ವಿಗಾಗಿ ಡಾ. ವೈ.ವಿ. ಕೃಷ್ಣಮೂರ್ತಿ ಅವರನ್ನು ಮಾರ್ಗದರ್ಶಕರಾಗಿಯೂ ಶಿವಪ್ರಸಾದ್ ವರ್ಮುಡಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಇರುವ ಕಾರ್ಯಕಾರಿ ಸಮಿತಿ ಮತ್ತು ಕಾರ್ಯಕ್ರಮದ ಯಶಸ್ವಿಗೆ ವಿವಿಧ ವಿಭಾಗ ಸಮಿತಿಗಳನ್ನು ರಚಿಸಲಾಯಿತು.
     ಈಶ್ವರಿ ಬೇರ್ಕಡವು, ಕುಸುಮ ಪೆರ್ಮುಖ ಇವರ ನೇತೃತ್ವದಲ್ಲಿ 1 ಲಕ್ಷ ಹಲಸಿನ ಹಪ್ಪಳ ತಯಾರಿಸಲು ಮತ್ತು ಇದರ ವಿಕ್ರಯದಿಂದ ಬಂದ ಹಣವನ್ನು ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲು ಮುಳ್ಳೇರಿಯ ಮಂಡಲದ  ಮಾತೆಯರು ತೀರ್ಮಾನಿಸಿದರು.
    ಮಹಾಮಂಡಲ, ಮಂಡಲ, ಮತ್ತು ವಲಯ ಪದಾಧಿಕಾರಿಗಳು, ಗೋ ಶಾಲೆಯ ಪದಾಧಿಕಾರಿಗಳು,  ಮಹಿಳೋದಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries