* ಕಾಸರಗೋಡು ಜಿಲ್ಲೆಯಲ್ಲಿ ಶೇ.79.12 ತೇರ್ಗಡೆ
* ಕಳೆದ ವರ್ಷಕ್ಕಿಂತ ಶೇ. ಫಲಿತಾಂಶ ಹೆಚ್ಚಳ
* ಕಲ್ಲಿಕೋಟೆ ಜಿಲ್ಲೆ ಗರಿಷ್ಠ
* ಪತ್ತನಂತಿಟ್ಟ ಜಿಲ್ಲೆ ಕನಿಷ್ಠ
* 79 ಶಾಲೆಗಳಲ್ಲಿ ಶೇ.100 ಫಲಿತಾಂಶ
* ಎಲ್ಲಾ ವಿಷಯಗಳಲ್ಲಿ 14244 ವಿದ್ಯಾರ್ಥಿಗಳು ತೇರ್ಗಡೆ
* 183 ವಿದ್ಯಾರ್ಥಿಗಳಿಗೆ 1200 ರಲ್ಲಿ 1200 ಅಂಕ
ಕಾಸರಗೋಡು: ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆದ ಕೇರಳ ರಾಜ್ಯ ಪ್ಲಸ್ ಟು ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ರಾಜ್ಯದಲ್ಲಿ ಶೇ.84.33 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಶೇ.79.12 ಫಲಿತಾಂಶ ಬಂದಿದೆ.
ರಾಜ್ಯದಲ್ಲಿ ಒಟ್ಟು 3,69,238 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 311375 ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.83.75 ಫಲಿತಾಂಶ ಬಂದಿತ್ತು. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಅಧಿಕವಾಗಿದೆ. ಕಲ್ಲಿಕೋಟೆ ಜಿಲ್ಲೆ ಅತ್ಯಂತ ಹೆಚ್ಚು ಫಲಿತಾಂಶ ಪಡೆದಿದೆ. ಈ ಜಿಲ್ಲೆಯಲ್ಲಿ ತೇರ್ಗಡೆಯಾದವರ ವಿದ್ಯಾರ್ಥಿಗಳು ಶೇ.87.44. ಪತ್ತನಂತಿಟ್ಟ ಜಿಲ್ಲೆ ಅತ್ಯಂತ ಕಡಿಮೆ ಫಲಿತಾಂಶ ಪಡೆದಿದೆ. ಈ ಜಿಲ್ಲೆಯಲ್ಲಿ ಕೇವಲ ಶೇ.78 ಮಂದಿ ತೇರ್ಗಡೆಯಾಗಿದ್ದಾರೆ. ರಾಜ್ಯದ 79 ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಶೇ.83.36, ಅನುದಾನಿತ ಶಾಲೆಗಳಲ್ಲಿ ಶೇ.86.36 ಮತ್ತು ಅನನುದಾನಿತ ಶಾಲೆಯಲ್ಲಿ ಶೇ.77.34 ಫಲಿತಾಂಶ ಬಂದಿದೆ. ರಾಜ್ಯದಲ್ಲಿ 14244 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಸಾ`Àನೆ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಎ ಪ್ಲಸ್ ಸಾ`Àನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ 1795. 183 ವಿದ್ಯಾರ್ಥಿಗಳು 1200 ರಲ್ಲಿ 1200 ಅಂಕಗಳಿಸಿದ ಸಾ`Àನೆ ಮಾಡಿದ್ದಾರೆ. ಮಲಪ್ಪುರ ಜಿಲ್ಲೆ ಅತ್ಯ„ಕ ಸಂಖ್ಯೆಯಲ್ಲಿ ಎ ಪ್ಲಸ್ ಪಡೆದ ಸಾಧನೆ ಮಾಡಿದೆ.
ವೊಕೇಶನಲ್ ಹೈಯರ್ ಸೆಕೆಂಡರಿ ಎಜುಕೇಶನ್‍ನಲ್ಲಿ ಶೇ.80.07, ಟಿಎಚ್‍ಎಸ್‍ಇಯಲ್ಲಿ ಶೇ.69.76 ಮತ್ತು ಎಎಚ್‍ಎಇಯಲ್ಲಿ ಶೇ.93.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವೊಕೇಶನಲ್ ಹೈಯರ್ ಸೆಕೆಂಡರಿಯಲ್ಲಿ 23 ಶಾಲೆಗಳು ಶೇ.100 ಸಾಧನೆ ಮಾಡಿದೆ. 63 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.
ಸೇ ಪರೀಕ್ಷೆ ಬರೆಯುವವರ ಮೇ 15 ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಜೂನ್ 10 ರಿಂದ 17 ರ ವರೆಗೆ ಸೇ ಪರೀಕ್ಷೆ ನಡೆಯಲಿದೆ. ಪ್ರಾಕ್ಟಿಕಲ್ ಪರೀಕ್ಷೆ ಮೇ 30 ಮತ್ತು 31 ರಂದು ನಡೆಯುವುದು. ಪುನರ್ ಮೌಲ್ಯ ನಿರ್ಣಯ, ಫೆÇೀಟೋಕಾಪಿ, ಸೂಕ್ಷ್ಮ ಪರಿಶೋಧನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15. ಪ್ಲಸ್ ವನ್ ತರಗತಿಗಳು ಜೂನ್ 3 ರಂದು ಆರಂಭಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಲಿಟಿಲ್ ಪ್ಲವರ್ ಹೈಯರ್ ಸೆಕೆಂಡರಿ ಸ್ಕೂಲ್ ಕಾಂಞಂಗಾಡ್, ಮಾರ್ತೋಮಾ ಹೈಯರ್ ಸೆಕೆಂಡರಿ ಸ್ಕೂಲ್ ಫಾರ್ ಡೆಪ್ ಕಾಸರಗೋಡು ಮೊದಲಾದ ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ.