ಬದಿಯಡ್ಕ: 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 8 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಭಿರಾಮ.ಪಿ, ಅಪರ್ಣ.ಎಸ್, ಆಶಾ.ಕೆ, ಕೃಪೇಶ್.ಎ, ಪ್ರಶಾಂತ್.ವಿ, ಶಮಾ.ಎ, ಶರಣ್ಯ ಪಿ.ಜೆ, ವರಲಕ್ಷ್ಮಿ.ಎನ್ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 180 ಮಂದಿ ಪರೀಕ್ಷೆ ಬರೆದಿದ್ದು 172 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ ಶೇ.96 ಫಲಿತಾಂಶವನ್ನು ತಂದಿದ್ದಾರೆ.