ಕಾಸರಗೋಡು: ಮಾರ್ಚ್ ತಿಂಗಳಲ್ಲಿ ನಡೆದ ಸಿ.ಬಿ.ಎಸ್.ಸಿ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಯ ಪೆರಿಯ ಜವಾಹರ್ ನವೋದಯ ವಿದ್ಯಾಲಯದ ಆರ್ಯಾ ನಾರಾಯಣನ್ ಅವರು ರಾಷ್ಟ್ರೀಯ ಮಟ್ಟದಲ್ಲಿ 8 ನೇ ರ್ಯಾಂಕ್ ಪಡೆದು ನಾಡಿಗೆ ಹಿರಿಮೆ ತಂದಿದ್ದಾರೆ.
ಶೇ.98.4 ಅಂಕ ಆರ್ಯಾ ಅವರಿಗೆ ಲಭಿಸಿದೆ. ಶಾಲಾ ಮಟ್ಟದಲ್ಲಿ ಕಾರ್ತಿಕ್ ಕುಮಾರ್, ಮರಿಯಾ ಕ್ರಿಸ್ಟ್ ಅವರಿಗೆ ದ್ವಿತೀಯ ಮತ್ತು ಆದರ್ಶ್ ಮತ್ತು ಆರ್ಯಾ ಎನ್. ಅವರು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಶೇ.100 ಫಲಿತಾಂಶ ಪಡೆದ ಈ ವಿದ್ಯಾಲಯ ಅತ್ಯುತ್ತಮ ಫಲಿತಾಂಶ ಗಳಿಸಿದೆ. ಒಟ್ಟು 82 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 71 ಡಿಸ್ಟಿಂಕ್ಷನ್, 42 ಮಕ್ಕಳು ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ್ದಾರೆ. 7 ಮಕ್ಕಳು ವಿಜ್ಞಾನದಲ್ಲಿ, ಮೂವರು ಗಣಿತದಲ್ಲಿ 100ರಲ್ಲಿ 100 ಅಂಕ ಪಡೆದಿದ್ದಾರೆ. ವಿಜೇತರನ್ನು ಶಾಲೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಶಾಲೆಯ ಪ್ರಾಂಶುಪಾಲ, ಶಿಕ್ಷಕರು ಮತ್ತು ರಕ್ಷಕ-ಶಿಕ್ಷಕ ಸಂಘ ಅಭಿನಂದಿಸಿದರು.
ತೇರ್ಗಡೆಗೊಂಡಿರುವ ಎಲ್ಲ ವಿದ್ಯಾರ್ಥಿಗಳು ಮೇ 13ರಂದು ಬೆಳಗ್ಗೆ 11 ಗಂಟೆಗೆ ಹೆತ್ತವರ ಸಹಿತ ವಿದ್ಯಾಲಯದಲ್ಲಿ ಹಾಜರಾಗುವಂತೆ ಪ್ರಾಂಶುಪಾಲ ತಿಳಿಸಿದ್ದಾರೆ.