ಕಾಸರಗೋಡು: ಲೋಕಸಭೆ ಚುನಾವಣೆಯ ಮತಗಣನೆಗಾಗಿ ಜಿಲ್ಲೆಯಲ್ಲಿ 900 ಸಿಬ್ಬಂದಿ ಕರ್ತವ್ಯದಲ್ಲಿರುವರು. ಇವರಲ್ಲಿ 141 ಮಂದಿ ಎಣಿಕಾ ಮೇಲ್ವಿಚಾರಕರು, 148 ಎಣಿಕಾ ಸಹಾಯಕ ಮೇಲ್ವಿಚಾರಕರು, 139 ಮೈಕ್ರೋ ಒಬ್ಸರ್ ವರ್ ಗಳು,7 ವಿಧಾನಸಭೆ ಕ್ಷೇತ್ರಗಳ 7 ಮಂದಿ ಉಪಚುನಾವಣೆ ಅಧಿಕಾರಿಗಳು ಮತ್ತು ಅವರಿಗೆ ಸಹಾಯಕರು, ಜಿಲ್ಲಾಧಿಕಾರಿಗೆ ಸಹಾಯಕ ತಂಡ ಮತ್ತು ತಾಂತ್ರಿಕ ತಂಡ ಹೀಗೆ ಒಟ್ಟು 900 ಮಂದಿ ಸಿಬ್ಬಂದಿ ಕರ್ತವ್ಯದಲ್ಲಿರುವರು.
ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಮಂಜೂರು ಮಾಡಿರುವ ಒಂದೊಂದು ಗಣನೆ ಮೇಜಿನಲ್ಲೂ ಎಣಿಕಾ ಮೇಲ್ವಿಚಾರಕರು, ಸಹಾಯಕರ ಜೊತೆಗೆ ಮೈಕ್ರೋ ಒಬ್ಸರ್ ವರ್ ಗಳು ಇರುವರು. ಇ.ವಿ.ಎಂ., ವಿವಿಪಾಟ್ , ಅಂಚೆ ಮತಗಳ ಗಣನೆಯನ್ನು ಸೂಕ್ಷ್ಮವಾಗಿ ನಿಗಾ ಇರಿಸಿ, ಆಯಾ ಉಪಚುನಾವಣಾಧಿಕಾರಿಗಳ ಮತ್ತು ಒಬ್ಸರ್ ವರ್ ಗಳ ಗಮನಕ್ಕೆ ತರುವ ಹೊಣೆ ಮೈಕ್ರೋ ಒಬ್ಸರ್ ವರ್ ಗಳದ್ದಾಗಿರುತ್ತದೆ. ಟ್ರೆಂಡ್,ಇ-ಸುವಿಧಾ ಇತ್ಯಾದಿ ಆಪ್, ವೆಬ್ ಸೈಟ್ ಗಳಿಗೆ ಮಾಹಿತಿ ಯಥಾ ಸಮಯದಲ್ಲಿ ಅಪ್ ಲೋಡ್ ನಡೆಸುವಿಕೆಯ ಸಮರ್ಪಕತೆಯ ಬಗೆಗೂ ಇವರು ನಿಗಾ ಇರಿಸುವರು.
ಮತಗಣನೆ ಕೇಂದ್ರಕ್ಕೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ:
ಮತಗಣನೆಯ ದಿನ(ಮೇ 23) ಕರ್ತವ್ಯದಲ್ಲಿರುವ ಸಿಬ್ಬಂದಿ ಮತ್ತು ಎಣಿಕಾ ಸಿಬ್ಬಂದಿಗಳಿಗೆ ಮತಗಣನೆಯ ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿಗೆ ತೆರಳುವ ನಿಟ್ಟಿನಲ್ಲಿ ಕಾಸರಗೋಡಿನಿಂದ ಕೆ.ಎಸ್.ಆರ್.ಟಿ.ಸಿ. ಪ್ರತ್ಯೇಕ ಬಸ್ ಸೇವೆ ಇರುವುದು. ಮುಂಜಾನೆ 4.40 ಮತ್ತು 5.20ಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಮತ್ತು ಬೆಳಿಗ್ಗೆ 5 ಗಂಟೆಗೆ ಕೆ.ಎಸ್.ಟಿ.ಪಿ. ಮೂಲಕ ತೆರಳುವ ಬಸ್ ಗಳು ಕಾಸರಗೋಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಹೊರಡಲಿದೆ. ಸಂಬಂಧಪಟ್ಟವರು ಈ ಸೌಲಭ್ಯ ಪ್ರಯೋಜನ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.