ಕಾಸರಗೋಡು: ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ 97.71 ಫಲಿತಾಂಶ ಲಭಿಸಿದೆ.
ಜಿಲ್ಲೆಯ 161 ಶಾಲೆಗಳಿಂದ 18,975 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 18,541 ಮಂದಿ ತೇರ್ಗಡೆಗೊಂಡು,ಮುಂದಿನ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 90 ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. 1461 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ "ಎ"ಶ್ರೇಣಿ ಪಡೆದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಞÂಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಒಟ್ಟು 161 ಶಾಲೆಗಳಲ್ಲಿ 96 ಸರಕಾರಿ ಶಾಲೆಗಳು, 35 ಅನುದಾನಿತ ಶಾಲೆಗಳು, 30 ಅನುದಾನ ರಹಿತ ಶಾಲೆಗಳು ಇವೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10,608 ಮಂದಿ, ಕಾ?ಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 8,367 ಮಂದಿ ಪರೀಕ್ಷೆ ಬರೆದಿದ್ದಾರೆ. ಕಾಸರಗೋಡಿನಲ್ಲಿ 10.238 ಮಂದಿ, ಕಾ?ಂಗಾಡಿನಲ್ಲಿ 8,303 ಮಂದಿ ತೇರ್ಗಡೆಹೊಂದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 84 ಶಾಲೆಗಳಲ್ಲಿ, ಕಾ?ಂಗಾಡ್ ಶೈಕ್ಷಣಿಕಜಿಲ್ಲೆಯಲ್ಲಿ 77 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆದಿವೆ.
ಅತ್ಯಧಿಕ ಪ್ರಮಾಣದಲ್ಲಿ "ಎ"ಶ್ರೇಣಿ ಸರಕಾರಿ ಶಾಲೆ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಇಲ್ಲಿ 60 ಮಂದಿ ವಿದ್ಯಾರ್ಥಿಗಳು ಈ ಸಾಲಿನಲ್ಲಿದ್ದಾರೆ. ಅನುದಾನಿತ ವಿಭಾಗದಲ್ಲಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಿದೆ. ಇಲ್ಲಿ 116 ವಿದ್ಯಾರ್ಥಿಗಳು ಈ ವಿಜಯ ಸಾಧಿಸಿದ್ದಾರೆ. ಉದಿನೂರು ಸರಕಾರಿ ಹೈಯರ್ ಸೆಕಂಡರಿ ಸಾಲೆ ಮತ್ತು ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಸಾಲೆಯಲ್ಲಿ ತಲಾ 55 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ "ಎ"ಶ್ರೇಣಿ ಪಡೆದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 535 ವಿದ್ಯಾರ್ಥಿಗಳು, ಕಾ?ಂಗಾಡ್ ಶೈಕ್ಷಣಿಕಜಿಲ್ಲೆಯಲ್ಲಿ 926 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ "ಎ"ಶ್ರೇಣಿ ಪಡೆದಿದ್ದಾರೆ. ಕಾಸರಗೋಡಿನಲ್ಲಿ 36, ಕಾ?ಂಗಾಡಿನಲ್ಲಿ 54 ವಿದ್ಯಾಲಯಗಳು ಶೇ 100 ಫಲಿತಾಂಶ ಪಡೆದಿವೆ.
ಶೇ 100 ಫಲಿತಾಂಶ ಪಡೆದ ಜಿಲ್ಲೆಯ 6 ಪ್ರೀಮೆಟ್ರಿಕ್ ಹಾಸ್ಟೆಲ್ ಗಳು:
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಜಿಲ್ಲೆಯ 6 ಪ್ರೀಮೆಟ್ರಿಕ್ ಹಾಸ್ಟೆಲ್ ಗಳು ಎಸ್.ಎಸ್.ಎಲ್.ಸಿಯಲ್ಲಿ ಶೇ 100 ಫಲಿತಾಂಶ ಪಡೆದಿವೆ. ಇಲ್ಲಿ ವಸತಿ ಹೂಡಿದ ಎಲ್ಲ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದಾರೆ.
ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಬದಿಯಡ್ಕ ಹಾಸ್ಟೆಲ್ ನ 4 ವಿದ್ಯಾರ್ಥಿಗಳು, ಕಾಸರಗೋಡು ನಗರಸಭೆ ವ್ಯಾಪ್ತಿಯ ಹುಡುಗರ ಹಾಸ್ಟೆಲ್ನ 18 ವಿದ್ಯಾರ್ಥಿಗಳು, ಕಾರಡ್ಕ ಬ್ಲೋಕ್ ವ್ಯಾಪ್ತಿಯ ಕಾರಡ್ಕ ಹಾಸ್ಟೆಲ್ ನ 7 ವಿದ್ಯಾರ್ಥಿಗಳು, ಕಾ?ಂಗಾಡ್ ನಗರಸಭೆಯ ಹುಡುಗಿಯರ ಹಾಸ್ಟೆಲ್ ನ ಮತ್ತು ಕಾ?ಂಗಾಡ್ ಬ್ಲೋಕ್ನ ಬಂಗಳಂ ಹಾಸ್ಟೆಲ್ ನ 8 ವಿದ್ಯಾರ್ಥಿಗಳು, ಪರಪ್ಪ ಬ್ಲೋಕ್ ನ ರಾಜಪುರಂ ಹಾಸ್ಟೆಲ್ ನ 4 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ.
ಸಮಾಜದಲ್ಲಿ ಅತಿ ಹಿಂದುಳಿದರುವ ವಿದ್ಯಾರ್ಥಿಗಳಿಗಾಗಿ ಈ ಹಾಸ್ಟೆಲ್ ಗಳಿದ್ದು, ಅತ್ಯುತ್ತಮ ಕೋಚಿಂಗ್ ಮೂಲಕ ಈ ಸಾಧನೆ ನಡೆದಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಹಾಸ್ಟೆಲ್ ಗಳು ಚಟುವಟಿಕೆ ನಡೆಸುತ್ತಿವೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೇ 15ರಿಂದ ಇಲ್ಲಿ ಪ್ರವೇಶಾತಿ ಆರಂಭಗೊಳ್ಳಲಿದೆ. ಶಿಕ್ಷಣ, ವಸತಿ, ಭೋಜನ ಇಲ್ಲಿ ಉಚಿತವಾಗಿದ್ದು, ಪ್ರತಿತಿಂಗಳು 280 ರೂ.ಪಾಕೆಟ್ ಮನಿ ನೀಡಲಾಗುತ್ತಿದೆ. 5ರಿಂದ 10ನೇ ತರಗತಿ ವರೆಗಿನ ತರಗತಿಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿ ಇದೆ. ಮಾಹಿತಿಗೆ ಬ್ಲಾಕ್ ಪರಿಶಿಷ್ಟ ಜತಿ ಅಭಿವೃದ್ಧಿ ಕಚೇರಿಗಳನ್ನು ಸಂಪರ್ಕಿಸಬಹುದು.