ಪೆರ್ಲ: ಸೋಮವಾರ ಪ್ರಕಟಗೊಂಡ ಹತ್ತನೇ ತರಗತಿ ಫಲಿತಾಂಶದಲ್ಲಿ ಪೆರ್ಲ ಸತ್ಯನಾರಾಯಣ ವಿದ್ಯಾಸಂಸ್ಥೆ ಶೇ.99 ರ ದಾಖಲೆಯ ಫಲಿತಾಂಶ ಹೊಂದಿ ಕೀರ್ತಿಗೆ ಭಾಜನವಾಗಿದೆ.
ಶಾಲೆಯ ಪ್ರಣವ್ ಬಿ, ಕವಿತಾ ಲಕ್ಷ್ಮೀ ಎನ್.ಎಲ್, ಭೂಮಿಕಾ ಬಿ, ನಿರಂಜನ ಎಸ್, ಶ್ರೇಯಸ್ ಭಟ್ ಬಿ, ಹಾರ್ತಿಕ್ ವೈ ಎಲ್ಲಾ ಪಠ್ಯಗಳಲ್ಲೂ ಎ.ಪ್ಲಸ್ ಅಂಕಗಳನ್ನು ಪಡೆದಿದ್ದಾರೆ. ಪ್ರಸ್ತುತ ಸಾಲಿನಲ್ಲಿ 108 ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿ ವ್ಯಾಸಂಗ ಮಾಡಿದ್ದು, ಈ ಪೈಕಿ 68 ಬಾಲಕರು ಹಾಗೂ 40 ಬಾಲಕಿಯರು ಒಳಗೊಂಡಿದ್ದಾರೆ.