ಕಾಸರಗೋಡು: ಕೂಡ್ಲು ರಾಮದಾಸನಗರ ಶಾಸ್ತಾ ನಗರದಲ್ಲಿ ಪುನರ್ ನಿರ್ಮಿತ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾ ಚಿತ್ರ ಸ್ಥಾಪನೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಅಷ್ಟೋತ್ತರ ಶತನಾಳಿಕೇರ ಗಣಪತಿ ಹೋಮ ನಡೆಯಿತು.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಅಷ್ಟೋತ್ತರ ಶತನಾಳಿಕೇರ ಗಣಪತಿ ಹೋಮ, ಸಾಮೂಹಿಕ ಶ್ರೀ ಶನೈಶ್ವರ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಭಕ್ತಿಗಾನ ಸುಧಾ, ಸಂಜೆ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾಚಿತ್ರದ ಮೆರವಣಿಗೆ, ರಾತ್ರಿ ಪೂಜೆ, ನೃತ್ಯಾರ್ಚನೆ, ಅನ್ನಸಂತರ್ಪಣೆ, ಮಣಿನಾದಂ ನಡೆಯಿತು.
ಮೇ 26 ರಂದು ಬೆಳಿಗ್ಗೆ 5.30 ಕ್ಕೆ ಗಣಪತಿ ಹೋಮ, 6.07 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ರೇಖಾಚಿತ್ರ ಸ್ಥಾಪನೆ, 6.30 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30 ಕ್ಕೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30 ಕ್ಕೆ ಪೂಜೆ, 8 ಕ್ಕೆ ಅನ್ನಸಂತರ್ಪಣೆ, 9 ರಿಂದ ನಾಟಕ ನಡೆಯಲಿದೆ.