ಮಂಜೇಶ್ವರ: ವರ್ಕಾಡಿ ಬಜಲಕರಿಯ ಶ್ರೀವಿದ್ಯಾ ಬೋಧಿನಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ವರ್ಕಾಡಿ ಗ್ರಾ.ಪಂ.ಮಟ್ಟದ ಶಾಲಾ ಪ್ರವೇಶೋತ್ಸವ ಸಮಿತಿ ರೂಪೀಕರಣ ಸಭೆ ಗುರುವಾರ ಶಾಲೆಯಲ್ಲಿ ನಡೆಯಿತು.
ಗ್ರಾ.ಪಂ. ಸದಸ್ಯೆ ರೆಹಮತ್ ರಝಾಕ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ಬ್ಲಾಕ್ ನಿರೂಪಣಾಧಿಕಾರಿ ವಿಜಯಕುಮಾರ್, ಚಂದ್ರಿಕಾ, ಮುಖ್ಯೋಪಾಧ್ಯಾಯಿನಿ ಕವಿತಾ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಪ್ರವೇಶೋತ್ಸವ ಸಮಿತಿ ಅಧ್ಯಕ್ಷೆಯಾಗಿ ರೆಹಮತ್ ರಝಾಕ್, ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಕವಿತಾ, ಜೊತೆ ಕಾರ್ಯದರ್ಶಿಯಾಗಿ ಜಯಂತ ನಾಯ್ಕ್ ಎಸ್ ಅವರನ್ನು ಆಯ್ಕೆಮಾಡಲಾಯಿತು. ಮುಖ್ಯೋಪಾಧ್ಯಾಯಿನಿ ಕವಿತಾ ಸ್ವಾಗತಿಸಿ, ಹರಿಣಾಕ್ಷಿ ವಿ ವಂದಿಸಿದರು. ಜಯಂತ್ ನಾಯ್ಕ್ ಕಾರ್ಯಕ್ರ ನಿರೂಪಿಸಿದರು.