ಮುಳ್ಳೇರಿಯ: ಅಮ್ಮಂಗೋಡು ಸತ್ಯನಾರಾಯಣಪುರದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸನ್ನಿಧಿಯಲ್ಲಿ ವಾರ್ಷಿಕೋತ್ಸವ, ದೈವಂಕಟ್ಟು ಹಾಗೂ ಒತ್ತೆಕೋಲ ಮಹೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಸಂಪನ್ನವಾಯಿತು.
ಗಣಹೋಮ, ನಾವಕಾಭಿಷೇಖ, ನಾಗತಂಬಿಲದೊಂದಿಗೆ ಕಾರ್ಯಕ್ರಮವು ಶುಭಾರಂಭವಾಯಿತು. ಪ್ರಸಾದ ವಿತರಣೆ ಮತ್ತು ಅನ್ನದಾನ, ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು.
ರಾತ್ರಿ ಭಂಡಾರ ಇಳಿಸುವುದು, ರಕ್ತೇಶ್ವರೀ ದೈವದ ಬೂಲ್ಯ ನೀಡುವುದು ಮತ್ತು ಅನ್ನದಾನ ನಡೆಯಿತು. ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮವು ಜರಗಿತು.
ರಕ್ತೇಶ್ವರೀ ದೈವ, ಉಮ್ಮಟ ಗುಳಿಗ ಮೊದಲಾದ ಕಾರ್ಯಕ್ರಮವು ಸಂಪನ್ನವಾಯಿತು. ರಾತ್ರಿ ಮೇಲೇರಿ ಸೇರುವುದು ಅಗ್ನಿ ಸ್ಪರ್ಶ ಜರಗಿದವು. ಬಳಿಕ ಜರಗಿದ ಸಭಾಕಾರ್ಯಕ್ರಮದಲ್ಲಿ ಪ್ರಕಾಶ ಅಮ್ಮಂಗೋಡು ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಪೂಜಾರಿ ನಾರಾಯಣ, ಸಮಿತಿಯ ಹಿರಿಯ ಸದಸ್ಯರಾದ ಚಂದ್ರಶೇಖರ ಗೋಳಿಯಡ್ಕ, ರಾಜೀವಿ ಗೋಳಿಯಡ್ಕ, ಸುಲೋಚನಾ ಕುಂಡಡ್ಕ, ಬಾಲಕೃಷ್ಣ ಕುಂಬಳೆ, ಗಣಪತಿ ರಾವ್ ಅಮ್ಮಂಗೋಡು ಅವರನ್ನು ಶಾಲುಹೊದೆಸಿ ಸ್ಮರಣಿಕೆಯನ್ನಿಟ್ಟು ಗೌರವಿಸಲಾಯಿತು. ಕರುಣಾಕರ ಮಾಸ್ಟರ್, ಗೋವಿಂದ ಬಳ್ಳಮೂಲೆ ಅವರು ಶುಭಾಶಂಸನೆಗೈದರು. ಖ್ಯಾತ ಚಲನಚಿತ್ರ ನಿರ್ದೇಶಕ ಅಲಿ ಅಕ್ಬರ್ ಅವರು ಧಾರ್ಮಿಕ ಭಾಷಣ ಮಾಡಿದರು. ಪುರುಷೋತ್ತಮ ಗೋಳಿಯಡ್ಕ ವಂದಿಸಿದರು. ಸಭಾಕಾರ್ಯಕ್ರಮದ ನಂತರ ಮಹಿಳಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ಜರಗಿದವು.