ಕಾಸರಗೋಡು: ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಪರವನಡ್ಕ ಮಾದರಿ ವಸತಿ ಶಾಲೆ, ಆಶ್ರಮಂ ಶಾಲೆಗಳಲ್ಲಿ ಕರಾರು ಮೇರೆಗೆ ಶಿಕ್ಷಕರ ನೇಮಕಾತಿ ಸಂಬಂಧ ಸಂದರ್ಶನ ಮೇ 13 ಮತ್ತು 14ರಂದು ನಡೆಯಲಿದೆ.
13ರಂದು ಪ್ರೌಢಶಾಲೆ ವಿಭಾಗದ ಇಂಗ್ಲಿಷ್, ಫಿಸಿಕ್ಸ್, ಸಯನ್ಸ್, ಗಣಿತ, ನ್ಯಾಚುರಲ್ ಸಯನ್ಸ್, ಮಲಯಾಳ, ಹೈಯರ್ ಸೆಕೆಂಡರಿ ವಿಭಾಗದ ಇಂಗ್ಲೀಷ್, ಫಿಸಿಕ್ಸ್, ಕೆಮೆಸ್ಟ್ರಿ, ಗಣಿತ, ಬಾಟನಿ, ಝುವಾಲಜಿ, ಕಂಪ್ಯೂಟರ್ ಅಪ್ಲಿಕೇಶನ್, ಮಲಯಾಳ, ಕಂಪ್ಯೂಟರ್ ಇನ್ಸ್ ಸ್ಟ್ರಕ್ಟರ್ ಹುದ್ದೆಗಳಿಗೆ, 14 ರಂದು ಸಂಗೀತ ಶಿಕ್ಷಕ, ಪ್ರೌಢಶಾಲೆಯ ಸೋಷ್ಯಲ್ ಸಯನ್ಸ್, ಹಿಂದಿ, ಹೈಯರ್ ಸೆಕೆಂಡರಿ ಕಾಮರ್ಸ್, ಇಕನಾಮಿಕ್ಸ್, ಎಂ.ಸಿ.ಆರ್.ಟಿ., ಪಿ.ಡಿ.ಟೀಚರ್ ಹುದ್ದೆಗೆ, ಆಶ್ರಮ ಶಾಲೆಯಲ್ಲಿ ಮುಖ್ಯಶಿಕ್ಷಕ ಹುದ್ದೆಗೆ ಸಂದರ್ಶನ ನಡೆಯಲಿದೆ. ಆಸಕ್ತರು ಶಿಕ್ಷಣಾರ್ಹತೆ, ಜಾತಿ, ಅನುಭವ ಅರ್ಹತಾಪತ್ರ ಇತ್ಯಾದಿಗಳ ಸಹಿತ ಹಾಜರಾಗಬಹುದು.