ಮಂಜೇಶ್ವರ : ಮೀಯಪದವು ಸಮೀಪದ ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕೈಗೊಂಡು ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಮಾರಂಭದ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕುದ್ದುಪದವು ಶ್ರೀ ಕೊರತಿ ಗುಳಿಗ ದೈವ ಕ್ಷೇತ್ರದ ಮೂಲಕ ಬುಡ್ರಿಯ ಶ್ರೀ ಕ್ಷೇತ್ರದವರೆಗೆ ನೂರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಬಣೆಯಿಂದ ಜರಗಿತು.
ಸಂಜೆ 6ರಿಂದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಲೀಲಾಕ್ಷ ಸಾಮಾನಿ ದೇರಂಬಳ ಅವರ ನೇತೃತ್ವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಸಭೆಯಲ್ಲಿ ವೇದಮೂರ್ತಿ ಗಣೇಶ ನಾವಡ ಚಿಗುರುಪಾದೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ, ಗೋವಿಂದ ಹೆಗ್ಡೆ ಬೆಜ್ಜ, ಕರುಣಾಕರ ರೈ ಕಳ್ಳಿಗೆ ಬೀಡು, ದಿನೇಶ ಬುಡಾಲೆ ಗುಂಡಿಬೈಲು, ಶ್ರೀಧರ ರಾವ್ ಮೀಯಪದವು, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಗೋಪಾಲಕೃಷ್ಣ ಪೂಜಾರಿ ಚಿಗುರುಪಾದೆ, ಶಂಕರನಾರಾಯಣ ಭಟ್ ಮುಂದಿಲ, ಮೋನಪ್ಪ ಪೂಜಾರಿ ಕಲ್ಕಾರು ಚಿನಾಲ ಉಪಸ್ಥಿತರಿದ್ದು ಮಾತನಾಡಿದರು. ವಸಂತ ಭಟ್ ತೊಟ್ಟೆತ್ತೋಡಿ, ತ್ಯಾಂಪಣ್ಣ ಶೆಟ್ಟಿ ದೇರಂಬಳ, ನಾರಾಯಣ ನಾೈಕ್ ನಡುಹಿತ್ಲು ಕುಳೂರು, ವಾಮಯ ಪೂಜಾರಿ ಕಲ್ಲಗದ್ದೆ ಗೌರವ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಡಿ.ಸದಾಶಿವ ರಾವ್ ಚಿಗುರುಪಾದೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಲಕ್ಷ್ಮೀಶ ಮಿತ್ತಾಳ ನಿರೂಪಿಸಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಅಶ್ವಿನಿ ಕಲ್ಲಗದ್ದೆ ವಂದಿಸಿದರು.
ರಾತ್ರಿ 7ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯತೆ ಪ್ರದರ್ಶನಗೊಂಡಿತು.