ಕಾಸರಗೋಡು: ಲೋಕಸಭೆ ಚುನಾವಣೆಯ ಮತಗಣನೆ ಮೇ 23ರಂದು ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಗ್ರಾಮ-ನಗರಗಳ ವ್ಯತ್ಯಾಸವಿಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆ ಸಂಬಂಧ ಕಳೆದ ಅನೇಕ ಕಾಲಗಳಿಂದ ನಡೆದುಬರುತ್ತಿರುವ ಬಿಸಿ ಚರ್ಚೆಗೆ ಮತಗಣನೆ ನಡೆದು ಫಲಿತಾಂಶ ಪ್ರಕಟಗೊಂಡ ಕೂಡಲೆ ಕೊನೆಬೀಳಲಿದೆ.
ಮತಗಣನೆಗಿರುವ ಎಲ್ಲ ಸಿದ್ದತೆಗಳು ಕೊನೆಯ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಇದರ ಅಂಗವಾಗಿ ಮೈಕ್ರೋ ಒಬ್ಸರ್ ವರ್ ಗಳ ತರಬೇತಿ ಕಾರ್ಯಕ್ರಮ ಇಂದು (ಮೇ 21) ಬೆಳಿಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯಲಿದೆ.
ಮತಗಣನೆ ಕೇಂದ್ರವಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಞÂಂಗಾಡ್ ವಿಧಾನಸಭೆ ಕ್ಷೇತ್ರಗಳ ತಲಾ 14 ಗಣನೆ ಯ ಮೇಜುಗಳು ಸಿದ್ಧವಾಗಿವೆ. ಉದುಮಾಕ್ಕೆ 10, ತ್ರಿಕರಿಪುರಕ್ಕೆ 13, ಪಯ್ಯನ್ನೂರು,ಕಲ್ಯಾಶೇರಿಗೆಗಳಿಗೆ ತಲಾ 12 ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರತಿ ಗಣನೆ ಮೇಜಿನಲ್ಲೂ ಮತ ಗಣನಾ ಮೇಲ್ವಿಚಾರಕರು, ಸಹಾಯಕ ಮೇಲ್ವಿಚಾರಕರು, ಮೈಕ್ರೋ ಒಬ್ಸರ್ ವರ್ ಗಳು ಇರುವರು. ಮೈಕ್ರೋ ಒಬ್ಸರ್ ವರ್ ಗಳ ನಿಗಾದಲ್ಲಿ ಮತ ಎಣಿಕಾ ಮೇಲ್ವಿಚಾರಕರು ಮತ್ತು ಸಹಾಯಕ ಮೇಲ್ವಿಚಾರಕರು ಪ್ರತಿ ಮೇಜಿನಲ್ಲಿ ಮತಗಳ ಗಣನೆ ನಡೆಸಲಿದ್ದಾರೆ. ಪ್ರತಿ ಗಣನೆಯ ಮೇಜಿನ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇರುವರು.
ಅಂಚೆ ಮತಗಳ ಗಣನೆ ಜಿಲ್ಲಾಧಿಕಾರಿ ಅವರ ಉಸ್ತುವಾರಿಯಲ್ಲಿ ನಡೆಯಲಿದೆ. ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿಯ ಶ್ರೇಣಿಯಲ್ಲಿರುವ 6 ಎ.ಆರ್.ಒ.ಗಳನ್ನು ನೇಮಿಸಲಾಗಿದೆ. ಇಲೆಕ್ಟ್ರಾನಿಕಲಿ ಟ್ರಾನ್ಸ್ ಮಿಟೆಡ್ ಪೋಸ್ಟಲ್ ವೋಟ್ ಗಳು, ಸ್ಕ್ಯಾನ್ ನಡೆಸಿ ಮತಗಣನೆ ನಡೆಸಲು 12 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ16 ತಂತ್ರಜ್ಞರು ಇರುವರು. ಪ್ರತಿ ವಿಧಾನಸಭೆ ಕ್ಷೇತ್ರದ 5 ಮತಗಟ್ಟೆಗಳನ್ನು ಆಯ್ದು, ಈ ಬೂತ್ ಗಳ ವಿವಿಪಾಟ್ ಸ್ಲಿಪ್ ಗಳನ್ನು ಗಣನೆ ಮಾಡಿ, ಮತಯಂತ್ರದ ಫಲಿತಾಂಶವನ್ನು ಹೋಲಿಸಿ ನೋಡಲಾಗುವುದು. ಮತಗಣನೆ ಕೇಂದ್ರದಲ್ಲಿ ಚುನಾವಣೆ ಅಧಿಕಾರಿ ಮತ್ತು ಜನರಲ್ ಒಬ್ಸರ್ ವರ್ ಗಳ ಜೊತೆಗೆ ಅಭ್ಯರ್ಥಿಗಳು ಕುಳಿತುಕೊಳ್ಳಲಿದ್ದಾರೆ.
ಕೌಂಟಿಂಗ್ ಏಜೆಂಟರು 23ರಂದು ಬೆಳಿಗ್ಗೆ 6 ಗಂಟೆಗೆ ಹಾಜರಾಗಬೇಕು:
ಮತಗಣನೆಯ ದಿನ (ಮೇ 23) ಬೆಳಿಗ್ಗೆ 6 ಗಂಟೆಗೆ ಅಭ್ಯರ್ಥಿಗಳ ಏಜೆಂಟರು ಮತಗಣನೆಯ ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಬಿಗಿ ಸುರಕ್ಷಾ ತಪಾಸಣೆಯ ನಂತರ ಇವರಿಗೆ ಕೇಂದ್ರದೊಳಗೆ ಪ್ರವೇಶಾತಿ ನೀಡಲಾಗುವುದು. ಮತಗಣನೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಕೆ ಸಲ್ಲದು. ತರುವವರ ಮೊಬೈಲ್ ಫೋನ್ ಹಿಡಿದಿರಿಸಲಾಗುವುದು. ಆಹಾರ ಮತ್ತು ನೀರು ಹೊರಗಡೆಯಿಂದ ತರುವಂತಿಲ್ಲ ಎಂದು ತಿಳಿಸಲಾಗಿದೆ.
ಮತಗಣನೆ ಹೀಗಿರುವುದು:
ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆ ಒಂದು ಸುತ್ತಿನಲ್ಲಿ 89 ಮತಗಟ್ಟೆಗಳ ಮತಗಳ ಗಣನೆ ನಡೆಯಲಿದೆ. ಒಟ್ಟು 15 ಸುತ್ತು ಗಳಲ್ಲಿ ಮತಗಣನೆ ಇರುವುದು. ಮಂಜೇಶ್ವರ,ಕಾಸರಗೋಡು, ಉದುಮಾ,ಕಾಞÂಂಗಾಡ್, ತ್ರಿಕರಿಪುರ,ಕಲ್ಯಾಶೇರಿ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳಿಗಾಗಿ ಪ್ರತ್ಯೇಕ ಮತಗಣನೆ ಕೊಠಡಿಗಳಲ್ಲಿ ಗಣನೆಯ ಮೇಜುಗಳು ಇರುವುವು.
ಪ್ರತಿ ವಿಧಾನಸಭೆ ಕ್ಷೇತ್ರದ ಮತಗಣನೆಯ ಕೊಠಡಿಗಳಲ್ಲಿ ಸಹಾಯಕ ರಿಟನಿರ್ಂಗ್ ಆಫೀಸರ್ (ಎ.ಆರ್.ಒ.) ರ ನೇತೃತ್ವದಲ್ಲಿ ಒಂದು ಟೇಬಲ್, ಜೊತೆಗೆ ನಿಗದಿತ ಗಣನೆಯ ಮೇಜೂ ಇರುವುದು. ಪ್ರತಿ ಮತ ಎಣಿಕಾ ಟೇಬಲ್ ನಲ್ಲಿ ಎಣಿಕಾ ಮೇಲ್ವಿಚಾರಕರು,ಸಹಾಯಕ ಮೇಲ್ವಿಚಾರಕರು, ಮೈಕ್ರೋ ಒಬ್ಸರ್ ವರ್ ಗಳು ಇರುವರು. ಎ.ರ್.ಒ.ನ ಟೇಬಲ್ ಸಹಿತ ಸಮೀಪ ಅಭ್ಯರ್ಥಿಗಳ ಏಜೆಂಟರಿಗೂ ಪ್ರತ್ಯೇಕ ಜಾಗ ಇರುವುದು. ಅಂಚೆ ಮತ ಗಳ ಮತ್ತು ವಿವಿಪಾಟ್ ಮತಗಳ ಗಣನೆ ಬೆಳಿಗ್ಗೆ 8 ರಿಂದ ಆರಂಭಗೊಳ್ಳಲಿದೆ. ಹಿಂದೆ ಅಂಚೆ ಮತಗಳನ್ನು ಮೊದಲಿಗೆ ಗಣನೆ ಮಾಡಲಾಗುತ್ತಿತ್ತು. ಈ ಮತಗಳನ್ನೂ ಪೂರ್ಣರೂಪದಲ್ಲಿ ಗಣನೆ ನಡೆಸಿದ ನಂತರ ವಿವಿಪಾಟ್ ಗಳ ಸ್ಲಿಪ್ ಗಳನ್ನು ಗಣನೆ ಮಾಡಲಾಗುವುದು.