ಮಂಜೇಶ್ವರ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿ ಜಗದ್ಗುರುಗಳ ಚಾತುರ್ಮಾಸದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ಕೋಟೆಕಾರು ಶಂಕರ ಮಠದಲ್ಲಿ ಇತ್ತೀಚೆಗೆ ಜರಗಿತು.
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಚಿಕ್ಕಮಗಳೂರು, ಶಿವಮೊಗ್ಗ ಪ್ರದೇಶದ ರಾಮರಾಜ ಕ್ಷತ್ರಿಯ ಸಮಾಜದ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.
ಗುರುವಂದನಾ ಸಮಿತಿಯ ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕೋಟೆಕಾರು ಶ್ರೀ ಶಂಕರ ಮಠದ ಬೊಳ್ಳಾವ ಸತ್ಯಶಂಕರ, ಎಸ್.ಎಲ್.ಭಾರದ್ವಾಜ್, ಜೆ.ಕೆ.ರಾವ್ ಮಂಗಳೂರು, ಚಿಕ್ಕಮಗಳೂರಿನಿಂದ ಶ್ರೀನಿವಾಸ ಕೊಪ್ಪ, ಕುಂದಾಪುರದ ರವೀಂದ್ರ ಕಾವೇರಿ, ಕಾಸರಗೋಡಿನಿಂದ ಜಗದೀಶ್ ಕೂಡ್ಲು, ಯೋಗೀಶ್ ಮಲ್ಲಿಗೆಮಾಡು, ಉಡುಪಿಯಿಂದ ಪ್ರವೀಣ್ ಕುಮಾರ್ ಗುರುಮೆ, ಸೀತಾರಾಮ ಕೊಪ್ಪಲು, ಸಾಯಿನಾಥ್ ಮಲ್ಲಿಗೆಮಾಡು, ಮಂಜುಳಾ ಅನಿಲ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಯಶವಂತ ಉಡುಪಿ, ಶಿವರಾಮ ಕಾಸರಗೋಡು, ನ್ಯಾಯವಾದಿ ಪ್ರವೀಣ್ ಕುಮಾರ್ ಕೂಡ್ಲು, ನರೇಶ್ ಮಲ್ಲಿಗೆಮಾಡು, ಹರೀಶ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರಾವಳಿ ಕಾವಲು ಪಡೆಯ ಸರ್ಕಲ್ ಇನ್‍ಸ್ಪೆಕ್ಟರ್ ಪ್ರಮೋದ್ ಕುಮಾರ್ ಸ್ವಾಗತಿಸಿ, ಸೀತಾರಾಮ ಕೊಪ್ಪಲು ವಂದಿಸಿದರು.