ಕಾಸರಗೋಡು: ಪೆರಿಯ ನವೋದಯ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಅವರು ಜಪಾನ್ ದೇಶದ ಸಯನ್ಸ್ ಆಂಡ್ ಎಕ್ನಾಲಜಿ ವಿಭಾಗ ನಡೆಸುವ ಸಾಕುರ ಎಕ್ಸ್ ಚೇಂಜ್ ಪ್ರೋಗ್ರಾಂ ಗೆ ಆಯ್ಕೆಗೊಂಡಿದ್ದಾರೆ.
ಶ್ರೀಲಕ್ಷ್ಮೀ ಅವರು ಪೆರಿಯ ನವೋದಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕ ನವೀನ್ ಕುಮಾರ್ ಭಕ್ತ-ಸುಮನಾ ಶೆಣೈ ದಂಪತಿ ಪುತ್ರಿ. ಮೇ 19ರಿಂದ 25 ವರೆಗೆ ಜಪಾನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಹೈದರಾಬಾದ್ ವಿಭಾಗದ 77 ವಿದ್ಯಾಲಯಗಳಿಂದ ಶ್ರೀಲಕ್ಷ್ಮಿ ಮಾತ್ರ ಆಯ್ಕೆಗೊಂಡವರು.