ಕುಂಬಳೆ: ಖಾಲಿಯಿರುವ ವಿವಿಧ ಅಧ್ಯಾಪಕರ ಹುದ್ದೆಗಳಿಗೆ ಕುಂಬಳೆ ಜಿಡಬ್ಲ್ಯುಎಲ್‍ಪಿ ಶಾಲೆಯಲ್ಲಿ ಮೇ 22ರಂದು ಬೆಳಿಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ.
ಎಲ್‍ಪಿಎಸ್‍ಎ - ಕನ್ನಡ (1), ಎಲ್‍ಪಿಎಸ್‍ಎ - ಮಲಯಾಲ(3), ಜ್ಯೂನಿಯರ್ ಲ್ಯಾಂಗ್ವೇಜ್ ಅರೇಬಿಕ್ (1) ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಎಲ್ಲ ಅಸಲಿ ಸರ್ಟಿಫಿಕೇಟ್‍ಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕೆಂದು ಕುಂಬಳೆ ಜಿಡಬ್ಲ್ಯುಎಲ್‍ಪಿ ಶಾಲೆಯ ಮುಖ್ಯೋಪಾಭ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.