ಮಂಜೇಶ್ವರ: ಜಮುನಾ ಜನ ಸೇವಾ ಸಮಿತಿಯ ಆಶ್ರಯದಲ್ಲಿರುವ ಪಯಸ್ವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ
6ನೇ ವರ್ಷದ ಮಕ್ಕಳ ಮನೋವಿಕಾಸ ಶಿಬಿರ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ
ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ತುಳುನಾಡ ದೈವರಾಧನೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ,ಸಂಘಟಕ ಜಯ ಮಣಿಯಂಪಾರೆ, ಜಮುನಾ ಸೇವಾ ಸಂಘದ ಸಂಯೋಜಕ ಸದಾಶಿವ ಕಡಂಬಾರ್, ಹನಿಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.