ಕುಂಬಳೆ: ಆರಿಕ್ಕಾಡಿ ಗುಂಡಿಗದ್ದೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರ ತಂತ್ರಿ ಶ್ರೀ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಶುದ್ಧಿಕಲಶ, ಶ್ರೀ ಗಣಪತಿ ಹವನ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ತಾರಾನಾಥ ಮಧೂರು, ರಾಘವಯ್ಯ ನೆಲ್ಲಿಕುಂಜೆ, ಪುರುಷೋತ್ತಮ, ಚಂದ್ರಹಾಸ, ಹರಿಕೃಷ್ಣ, ವರುಣ್ ಕುಮಾರ್, ನಾಗಾರಾಜ ಮಧೂರು, ಮನೋಜ್ ಕುಮಾರ್ ನೆಲ್ಲಿಕುಂಜೆ, ಜಯಂತಿ, ಲಕ್ಷ್ಮೀ ಪಾರೆಕಟ್ಟೆ, ದಿವಾಕರ ಮೊದಲಾದವರು ನೇತೃತ್ವ ನೀಡಿದರು.