ಬದಿಯಡ್ಕ: ಶ್ರೀಕ್ಷೇತ್ರ ಕೊಲ್ಲಂಗಾನ ಶ್ರೀದುರ್ಆಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿಯ ಪ್ರಸ್ತುತ ವರ್ಷದ ತಿರುಗಾಟದ ಕೊನೆಯ ಸೇವೆಯಾಟದ ದಿನವಾದ ಶುಕ್ರವಾರ ರಾತ್ರಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಪರಂಪರೆಯ ಭವ್ಯ ನೊಟಗಳೊಂದಿಗೆ ಗಮನಾರ್ಹವೆನಿಸಿತು.
ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕಲಿಕಾ ಕೇಂದ್ರದ ಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನ ಮತ್ತು ಪಾತ್ರದೊಂದಿಗೆ ಇಂದು ಅಪೂರ್ವವಾಗಿರುವ ಪರಂಪರೆಯ ಕೃಷ್ಣನ ಸಂಪೂರ್ಣ ಒಡ್ಡೋಲಗ ಪ್ರದರ್ಶನ ನಡೆಯಿತು. ಕೃಷ್ಣನಾಗಿ ಸ್ವತಃ ಸಬ್ಬಣಕೋಡಿ ರಾಮ ಭಟ್ ಈ ಅಪೂರ್ವ ಪ್ರದರ್ಶನ ನೀಡಿದರು. ಜೊತೆಗೆ ಗೋಪಿಕೆಯರಾಗಿ ಬಾಲಕೃಷ್ಣ ಸೀತಾಂಗೋಳಿ, ಸ್ವಸ್ತಕ್ ಶರ್ಮಾ ಪಳ್ಳತ್ತಡ್ಕ, ನಿಶಾಂತ್ ಬೇಂಗಪದವು ಮೊದಲಾದವರು ಸಹಕರಿಸಿದರು. ಹಿಮ್ಮೇಳದಲ್ಲಿ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು ಭಾಗವತಿಕೆಯಲ್ಲಿ ಸಹಕರಿಸಿದ್ದರು.