ಕಾಸರಗೋಡು: ಮುಳಿಯಾರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಪಿತ್ತ ಕಾಮಾಲೆ ಹಾಗೂ ಸಾಂಕ್ರಾಮಿಕ ಜ್ವರಗಳು ವ್ಯಾಪಕವಾಗಿ ಹರಡುತ್ತಿರುವುದಾಗಿ ತಿಳಿದುಬಂದಿದೆ. ಈ ಪರಿಸರದ ಸುಹೈಲ್(16)ಹಸೀಮಾ(10), ಫಸಿತ(8) ಹಾಮಿದ್(4)ವಾಜಿದ್(12)ಸುಲೈಖ(18)ಸನ್ವ(8)ಫಯಾಸ್(19). ಅಲ್‍ಅಮೀನ್(11), ಮಿನ್ ಹತ್(7)ವಾಹಿದ್(10)ಮೊದಲಾದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಮುಳಿಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕೃತರು ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಿಗೆ ಮಂಗಳವಾರ ಸಂದರ್ಶನ ನಡೆಸಿದರು. ಮುಳಿಯಾರು ಮೂಲಡ್ಕ ಸಹಿತ ವಿವಿಧೆಡೆಗಳ ಜನರು ಪಿತ್ತಕಾಮಾಲೆಯಿಂದ ಬಳಲುತ್ತಿರುವುದಾಗಿ ತಂಡದ ಸಂದರ್ಶನದ ವೇಳೆ ತಿಳಿದುಬಂತು. ಪಿತ್ತಕಾಮಾಲೆ ಹಾಗೂ ಸಾಂಕ್ರಾಮಿಕ ಜ್ವರ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಗತ್ಯ ಉಪಕ್ರಮಗಳಿಗೆ ವೈದ್ಯಕೀಯ ತಂಡ ರಚಿಸಬೇಕು, ಚಿಕಿತ್ಸಾ ಸೌಕರ್ಯ ವಿಸ್ತರಿಸಬೇಕು ಮೊದಲಾದ ಬೇಡಿಕೆಗಳನ್ನು ಗ್ರಾ.ಪಂ. ಸದಸ್ಯ ಅನೀಸ್ ಮನ್ಸೂರ್ ಮಲ್ಲ ಅವರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿರುವರು.