HEALTH TIPS

ಬಿಗಿ ಭದ್ರತೆಯೊಂದಿಗೆ ಸಾಂಗವಾಗಿ ನಡೆದ ಮತಗಣನೆ

           
     ಕಾಸರಗೋಡು: ಮತದಾನ ನಡೆದು ಒಂದು ತಿಂಗಳ ಕಾಯುವಿಕೆಯ ನಂತರ ಗುರುವಾರ ಮತಗಣನೆ ನಡೆದಿದೆ.
          ಪಡನ್ನಕ್ಕಾಡ್ ನೆಹರೂ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ಬಿಗಿಭದ್ರತೆಯೊಂದಿಗೆ ಮತಗಣನೆ ಸಾಂಗವಾಗಿ ಪೂರ್ಣಗೊಂಡಿದೆ.
       ಈ ಬಾರಿಯ ಕಾಸರಗೋಡು ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಎಸ್.ಪಿ. ಅಭ್ಯರ್ಥಿ ನ್ಯಾಯವಾದಿ ಬಶೀರ್ ಆಲಡಿ, ಬಿ.ಜೆ.ಪಿ. ಅಭ್ಯರ್ಥಿ ಕುಂಟಾರು ರವೀಶ ತಂತ್ರಿ, ಐಕ್ಯರಂಗ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್, ಎಡರಂಗ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್, ಸ್ವತಂತ್ರ ಅಭ್ಯರ್ಥಿಗಳಾದ ಗೋವಿಂದನ್ ಬಿ.ಆಲಿಲ್ತಾಳೆ, ನರೇಂದ್ರ ಕುಮಾರ್ ಕೆ., ರಣದೀವನ್ ಆರ್.ಕೆ., ರಮೇಶನ್ ಬಂದಡ್ಕ, ಸಜಿ ರಂಗದಲ್ಲಿದ್ದರು.
     ಗುರುವಾರ ನಸುಕಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವೃ ನೇತೃತ್ವದಲ್ಲಿ ಕೊನೆಯ ಹಂತದ ರಾಂಡಮೈಸೇಷನ್ ಪೂರ್ಣಗೊಳಿಸಲಾಗಿತ್ತು. ಸಿಬ್ಬಂದಿ ನೇಮಕಗೊಂಡಿರುವ ವಿಧಾನಸಭೆಯ ಯಾವ ಗಣನೆ ಮೇಜಿ ಬದಿ ಕುಳಿತುಕೊಳ್ಳಬೇಕು ಎಂಬ ನಿರ್ಣಯ ಈ ಮೂಲಕ ನಡೆದಿತ್ತು. ಬೆಳಗ್ಗೆ 7.45ಕ್ಕೆ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ, ಜನರಲ್ ಒಬ್ಸರ್ ವರ್ ಎಸ್.ಗಣೇಶ್, ಉಪಚುನಾವಣೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷದಲ್ಲಿ ಪೊಲೀಸ್ ಬಿಗಿಭದ್ರತೆಯೊಂದಿಗೆ ಸ್ಟ್ರಾಂಗ್ ರೂಂ ಗಳನ್ನು ತೆರೆಯಲಾಗಿತ್ತು.
      ಬೆಳಗ್ಗೆ 8 ಗಂಟೆಗೆ ಮತಗಣನೆ ಆರಂಭಿಸಲಾಗಿತ್ತು. ಮಂಜೇಶ್ವರ,ಕಾಸರಗೋಡು, ಕಾ?ಂಗಾಡ್ ವಿಧಾನಸಭೆಗಳಿಗಾಗಿ ತಲಾ 14 ಮೇಜುಗಳು, ಉದುಮಾ ವಿಧಾನಸಭೆಗಾಗಿ 10, ತ್ರಿಕರಿಪುರಕ್ಕಾಗಿ 13, ಪಯ್ಯನ್ನೂರು ಮತ್ತು ಕಲ್ಯಾಶೇರಿಗಳಿಗಾಗಿ ತಲಾ 12 ಮೇಜುಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳಲ್ಲಿ ಮತಗಣನೆ ನಡೆದಿದೆ.
     ಪ್ರತಿ ಮೇಜಿನ ನಿಗಾ ಹೊಣೆ ಉಪಚುನಾವಣೆ ಅಧಿಕಾರಿಗಳದಾಗಿತ್ತು. ಪ್ರತಿ ಕೌಂಟಿಂಗ್ ಟೇಬಲ್ ನಲ್ಲೂ ಕೌಂಟಿಂಗ್ ಸೂಪರ್ ವೈಸರ್ ಗಳು, ಕೌಂಟಿಂಗ್ ಅಸಿಸ್ಟೆಂಟ್ಗಳು ಪ್ರತಿ ಮೇಜಿನಲ್ಲಿ ಮತಗಳನ್ನು ಗಣನೆ ಮಾಡಿದ್ದರು. ಮೈಕ್ರೋ ಒಬ್ಸ ರ್ ವರ್ ಗಳು ಮೇಜುಗಳ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಿದ್ದರು. ಪ್ರತಿ ಕೌಂಟಿಂಗ್ ಟೇಬಲ್ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇದ್ದರು.
    ಅಂಚೆ ಮತಗಳ ಗಣನೆ ಚುನಾವಣೆ ಅಧಿಕಾರಿಯ ಮೇಲ್ನೋಟದಲ್ಲಿ ನಡೆದಿತ್ತು. ಸಹಾಯಕ ಜಿಲ್ಲಾಧಿಕಾರಿ ಶ್ರೇಣಿಯ 6 ಮಂದಿ ಎ.ಆರ್.ಒ.ಗಳನ್ನು ನೇಮಿಸಲಾಗಿತ್ತು.ಇಲೆಕ್ಟ್ರಾನಿಕಲಿ ಟ್ರಾನ್ಸ್ ಮಿಟೆಡ್ ಪೋಸ್ಟಲ್ ಬ್ಯಾಲೆಟ್ ವೋಟ್ ಗಳು(ಇ.ಟಿ.ಪಿ.ಬಿ.ಎಸ್.) ಸ್ಕ್ಯಾನ್ ನಡೆಸಿ ಮತಗಣನೆಗೆ ಸಜ್ಜುಗೊಳಿಸಲು ಸಿದ್ಧಪಡಿಸಲಾಗಿತ್ತು.ಇದಕ್ಕಾಗಿ 16 ಡೆಪ್ಯೂಟಿ ತಹಸೀಲ್ದಾರ್ ಶ್ರೇಣಿಯ ಸಿಬ್ಬಂದಿಯನ್ನು ಮತ್ತು ತಾಂತ್ರಿಕ ತಂಡವನ್ನು ನೇಮಿಸಲಾಗಿತ್ತು. ಇ.ವಿ.ಎಂ., ಪೋಸ್ಟಲ್ ಬ್ಯಾಲೆಟ್ ಇತ್ಯಾದಿ ಗಣನೆ ನಡೆದು ಪ್ರತಿ ವಿಧಾನಸಭೆ ಕ್ಷೇತ್ರದ ಚೀಟಿ ಎತ್ತುವ ಮೂಲಕ ಆಯ್ದ 5 ಮತಗಟ್ಟೆಗಳ ವಿವಿಪಾಟ್ ಸ್ಲಿಪ್ ಗಳನ್ನು ಗಣನೆ ಮಾಡಲಾಗಿದೆ.
ಕಳೆದ ಬಾರಿಯ (2014ರಲ್ಲಿ) ಲೋಕಸಭೆ ಕ್ಷೇತ್ರದಲ್ಲಿ ಕಾಸರಗೋಡು ಕ್ಷೇತ್ರದ ಫಲಿತಾಂಶ
    2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 7 ಮಂದಿ ಸ್ವತಂತ್ರರಾಗಿದ್ದರು.
   ಒಟ್ಟು ಮತದಾತರಲ್ಲಿ ಶೇ 78.49(974215) ಮಂದಿ ಅಂದು ಮತದಾನ ನಡೆಸಿದ್ದರು. ಇದರಲ್ಲಿ ಶೇ 39.76(384964) ಮತಗಳಿಸಿ ಸಿ.ಪಿ.ಎಂ.ನ ಪಿ.ಕರುಣಾಕರನ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ಟಿ.ಸಿದ್ದೀಖ್ 378043 ಮತಗಳನ್ನು, ಬಿ.ಜೆ.ಪಿ.ಯ ಕೆ.ಸುರೇಂದ್ರನ್ 172826 ಮತಗಳನ್ನು ಪಡೆದಿದ್ದರು. ಉಳಿದಂತೆ ಎಸ್.ಡಿ.ಪಿ.ಐ.ಯ ಅಬ್ದುಲ್ ಸಲಾಂ 9713 ಮತಗಳನ್ನು, ಎ.ಎ.ಪಿ.ಯ ಅಂಬಲತ್ತರ ಕುಂಞÂಕೃಷ್ಣನ್ 4996 ಮತಗಳನ್ನು, ಬಿ.ಎಸ್.ಪಿ.ಯ ನ್ಯಾಯವಾದಿ ಬಶೀರ್ ಆಲಡಿ 3104 ಮತಗಳನ್ನು ಪಡೆದಿದ್ದರು. ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಮನೋಹರನ್ ಕೆ.4194, ಕೆ.ಕೆ.ಅಶೋಕನ್ 3057, ಗೋತ್ರ ಮೂಪನ್ನೆಲ್ಲಿಕ್ಕಾಡನ್ ಕಣ್ಣನ್ ಅವರು 2655, ಪಿ.ಕೆ.ರಾಮನ್ 1222, ಕರುಣಾಕರನ್ ಪಯಂಗಪ್ಪಾಡನ್ 1002, ಅಬೂಬಕ್ಕರ್ ಸಿದ್ದೀಕ್ 880, ಕರುಣಾಕರನ್ ಕರಿಪ್ಪುರಯಿಲ್ 824, ಅಬ್ಬಾಸ್ ಮುದಲಪ್ಪಾರ632 ಮತಗಳನ್ನು ಪಡೆದಿದ್ದರು.
    ಯಾರಿಗೂ ಮತದಾನ ನಡೆಸದೇ ಇರುವ ವಿಭಾಗ ನೋಟದಲ್ಲಿ ಅಂದು 6103 ಮತಗಳು ಚಲಾವಣೆಯಾಗಿದ್ದುವು. ಇವುಗಳಲ್ಲಿ 10 ಅಂಚೆ ಮತದಾನವೂ ಸೇರಿದೆ.  ಕಾಸರಗೋಡು ಲೋಕಸಭೆ ಕ್ಷೇತ್ರದ ಚುನಾವಣೆಯ ಮತದಾನ ಗಳಿಕೆಯಲ್ಲಿ ಈ ವಿಭಾಗ 5ನೇ ಸ್ಥಾನದಲ್ಲಿತ್ತು. 
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries