ಮಧೂರು: ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಹಾಗೂ ವಿಶ್ವಕರ್ಮ ಸಾಹಿತ್ಯ ದರ್ಶನ ಸಮೂಹ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಉಳಿಯತ್ತಡ್ಕದ ಗುರುಕೃಪಾ ನಿವಾಸದಲ್ಲಿ "ಸಂಸ್ಕೃತಿ ಸಂವರ್ಧನಾ ಶಿಬಿರ" ಶನಿವಾರ ಜರಗಿತು
ವಿಶೇಷವಾಗಿ ಹೆಣ್ಮಕ್ಕಳಿಗೆ ಹಾಗೂ ಮಾತೆಯರಿಗೆ ಇರುವ ನಿತ್ಯ ಕರ್ಮಾನುಷ್ಠಾನಗಳು ದೇವತಾ ವಿಶೇಷ ಪ್ರಾರ್ಥನಾ ಶ್ಲೋಕಗಳು, ಸಂಸ್ಕೃತಿ ಯೋಗ್ಯವಾದ ಉಡುಗೆ-ತೊಡುಗೆಗಳ ಬಗ್ಗೆ ಮಾಹಿತಿಯನ್ನು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವೇದ ಸಂಸ್ಕೃತ ವಿದ್ವಾಂಸರಾದ ಬೇಲೂರು ವೇಲಾಪುರಿಯ ವಿಶ್ವನಾಥ ಶರ್ಮ ಸವಿವರವಾಗಿ ನೀಡಿದರು. ಭಾಗವಹಿಸಿದವರಿಗೆ ಗುರುಕೃಪಾ ವೈದಿಕ ಶಿಕ್ಷಣ ಸಮಿತಿಯ ಸಂಚಾಲಕರಾದ ಬ್ರಹ್ಮಶ್ರೀ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಪ್ರಮಾಣ ಪತ್ರ ವಿತರಿಸಿದರು.
ಸಮಾರಂಭದಲ್ಲಿ ಎಂ.ವೆಂಕಟ್ರಮಣ ಆಚಾರ್ಯ ಮುಳಿಗದ್ದೆ ಅಧ್ಯಕ್ಷತೆ ವಹಿಸಿದರು. ವಿಶ್ವಕರ್ಮ ಸಾಹಿತ್ಯ ದರ್ಶನ ಸಮೂಹದ ಸಂಸ್ಥಾಪಕ ಜಯ ಮಣಿಯಂಪಾರೆ,ರಾಮಕೃಷ್ಣ ಪುರೋಹಿತ್ ಆರಿಕ್ಕಾಡಿ,ಪ್ರಕಾಶ್ಚಂದ್ರ ಶೌತ್ರಿ, ಸಭೆಯಲ್ಲಿ ಉಪಸ್ಥಿತರಿದ್ದರು. ಹರಿ ಪ್ರಸಾದ್ ಶರ್ಮ ಉಳಿಯತ್ತಡ್ಕ ನಿರೂಪಿಸಿದರು.