ಕುಂಬಳೆ: ಜಿ..ಯಸ್.ಬಿ ಮಹಿಳಾ ಮಂಡಳಿ ಮತ್ತು ಜಿ.ಯಸ್.ಬಿ ಯುವಕ್ ಸಂಘ ಇದರ ಜಂಟಿ ಆಶ್ರಯದಲ್ಲಿ ಎರಡನೇ ವರ್ಷದ ವಸಂತ ಶಿಬಿರವು ಶುಕ್ರವಾರ ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದ ಸುಧೀಂದ್ರ ತೀರ್ಥ ಕಲಾ ಮಂದಿರದಲ್ಲಿ ಆರಂಭಗೊಂಡಿತು.
ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ವಿಕ್ರಂ ಪೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಹಿಸಿದ ಮೊಗಾರನಾಡು ಲಕ್ಷ್ಮಿ ನರಸಿಂಹ ದೇವಳದ ಅರ್ಚಕ ವೇದಮೂರ್ತಿ ಜನಾರ್ಧನ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳು ಮೂರು ದಿನ ನಡೆಯುವ ಶಿಬಿರದ ಪ್ರಯೋಜನವನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಕೆ.ಪುಂಡಲೀಕ ಭಟ್ ಉಪಸ್ಥಿತರಿದ್ದರು.ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಶಾಂತ ಚಂದ್ರಶೇಖರ ಭಟ್ ಸ್ವಾಗತಿಸಿ, ಯುವಕ್ ಸಂಘದ ಪ್ರದಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ವಂದಿಸಿದರು.ಬಳಿಕ ನಡೆದ ಶಿಬಿರದಲ್ಲಿ ಮಕ್ಕಳಿಗೆ ನಮನ, ಸ್ತೋತ್ರ, ಭಜನೆ ತರಗತಿ ಹಾಗು ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ವಿವರಿಸಿ ಮೊದಲ ದಿನದ ಶಿಬಿರವು ಮುಕ್ತಯವಾಯಿತು.ಭಾನುವಾರ ಸಂಜೆ ಶಿಬಿರ ಮುಕ್ತಾಯವಾಗಲಿದೆ.