ಕಾಸರಗೋಡು: ಮತಗಣನೆ ಪ್ರಕ್ರಿಯೆಯ ನಿಗಾ ಇರಿಸುವ ಹೊಣೆಗಾರಿಕೆಯಿರುವ ಮೈಕ್ರೋ ಒಬ್ಸರ್ ವರ್ ಗಳಿಗೆ ತರಬೇತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜನರಲ್ ಒಬ್ಸರ್ ವರ್ ಎಸ್.ಗಣೇಶ್, ಕೌಂಟಿಂಗ್ ಒಬ್ಸರ್ ವರ್, ಹಿಮಾಚಲ ನಿವಾಸಿ ಕೃಷ್ಣ ಚಂದ್, ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಮಾತನಾಡಿದರು. ತರಬೇತಿ ನೋಡೆಲ್ ಅಧಿಕಾರಿ ಕೆ.ವಿನೋದ್ ಕುಮಾರ್ ತರಗತಿ ನಡೆಸಿದರು. ಚುನಾವಣೆ ವಿಭಾಗ ಜ್ಯೂನಿಯರ್ ಸುಪರಿಟೆಂಡೆಂಟ್ ಗೋವಿಂದನ್ ಎಸ್. ಉಪಸ್ಥಿತರಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಲೋಕಸಭೆ ಕ್ಷೇತ್ರ ಮಟ್ಟದಲ್ಲಿ ಮೈಕ್ರೋ ಒಬ್ಸರ್ ವರ್ ಗಳ ಈ ವರೆಗಿನ ಚಟುವಟಿಕೆ ಪ್ರಶಂಸನೀಯವಾಗಿದೆ ಎಂದು ಜನರಲ್ ಒಬ್ಸರ್ ವರ್ ಎಸ್.ಗಣೇಶ್ ಈ ವೇಳೆ ತಿಳಿಸಿದರು.
ಮೈಕ್ರೋ ಒಬ್ಸರ್ ವರ್ ಗಳಿಗೆ ತರಬೇತಿ
0
ಮೇ 21, 2019