HEALTH TIPS

ಪೆರ್ಲದಲ್ಲಿ ಎ ಬಿ ಸ್ಪೋಟಿಂಗ್ ಕ್ಲಬ್ ವತಿಯಿಂದ ಕುಡಿನೀರು ವಿತರಣೆ

     
     ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೀವ್ರಗೊಂಡ ಕುಡಿನೀರು ತತ್ವಾರದ ಹಿನ್ನೆಲೆಯಲ್ಲಿ ಪೆರ್ಲ ಎ ಬಿ ಸ್ಪೋಟಿಂಗ್ ಕ್ಲಬ್ ವತಿಯಿಂದ ವಿವಿಧ ಪ್ರದೇಶಗಳಿಗೆ ಕುಡಿನೀರು ಸರಬರಾಜು ಮಾಡಲಾಯಿತು.
     ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಅಯಿಶಾ ಪೆರ್ಲ ಕುಡಿನೀರು ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಜಲಕ್ಷಾಮ ತೀವ್ರಗೊಂಡ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ವತಿಯಿಂದ ಕುಡಿನೀರು ವಿತರಣೆ ನಡೆಯುತ್ತಿದ್ದು, ಸಾಧ್ಯವಾದಷ್ಟು ಎಲ್ಲಾ ಪ್ರದೇಶಗಳಲ್ಲಿಯು ಕುಡಿನೀರು ತಲುಪಿಸಲು ಪಂಚಾಯತಿಯೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎ ಬಿ ಸ್ಪೋಟಿಂಗ್ ಕ್ಲಬ್ ಕೈಗೊಂಡ ಸೇವೆ ಸ್ತುತ್ಯಾರ್ಹವೆಂದು ಹೇಳಿದರು.
    ಎ ಕೆ ಹಮೀದ್ ಅಧ್ಯಕ್ಷತೆ ವಹಿಸಿದರು.ವಿನೋದ್ ಪೆರ್ಲ, ಕ್ಲಬ್ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಜಮಾಲ್ ಮತ್ರ್ಯ,ಮೂಸ ಬೇಂಗಪದವು, ಶರೀಫ್ ಎ ಕೆ, ಶರೀಫ್ ಕುನ್ನಿಲ್, ರಸಾಕ್, ಮರ್ಸೂಕ್, ತಸ್ಪೀನ್, ಅನಸ್, ಇಪ್ತಾಜ್ ಪೆರ್ಲ, ಬಶೀರ್ ಪೆರ್ಲ, ನವಾಸ್, ಮಶೂದ್ ಮತ್ರ್ಯ ಮೊದಲಾದವರು ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries