ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪೈವಳಿಕೆ ಸಮೀಪದ ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸವಿನೆನಪಿಗೆ ನಿರ್ಮಿಸಲಾದ ರಂಗಮಂದಿರಕ್ಕೆ ರೂ.75000 ಮೊತ್ತವನ್ನು ಮಂಜೂರು ಮಾಡಿರುತ್ತಾರೆ. ಇದರ ಮಂಜೂರಾತಿ ಪತ್ರವನ್ನು ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್ ರವರು ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳಿಗೆ ಇತ್ತೀಚೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ.ಯಂ, ಶಾಲಾ ವ್ಯವಸ್ಥಾಪಕ ಗಂಗಾಧರ ಬಲ್ಲಾಳ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸೀತಾರಾಮ ಬಲ್ಲಾಳ್, ಪೈವಳಿಕೆ ವಲಯದ ಮೇಲ್ವಿಚಾರಕ ಅನಿಲ್, ಶಾಲೆಯ ಹಿರಿಯ ಅಧ್ಯಾಪಕ ಚಂದ್ರಶೇಖರ ಭಟ್, ಶಾಲೆಯ ಹಳೆವಿದ್ಯಾರ್ಥಿ ಗಿರೀಶ್ ಮಾಸ್ತರ್ ಚಿಪ್ಪಾರ್ ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದಿಂದ ಚಿಪ್ಪಾರು ಶಾಲಾ ರಂಗಮಂದಿರ ನಿರ್ಮಾಣಕ್ಕೆ ಧನ ಸಹಾಯ
0
ಮೇ 21, 2019