ಮುಳ್ಳೇರಿಯ: ಮುಳಿಯಾರು ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದ್ರವ್ಯಕಲಶ ಮಹೋತ್ಸವವು ವೇ.ಮೂ. ಬ್ರಹ್ಮಶ್ರೀ ಅರವತ್ ದಾಮೋದರನ್ ತಂತ್ರಿಯವರ ನೇತೃತ್ವದಲ್ಲಿ ಪಾರಂಪರ್ಯ ಆಡಳಿತ ಮೊಕ್ತೇಸರ ಯನ್. ಸುಬ್ರಾಯ ಬಳ್ಳುಳ್ಳಾಯರ ಮಾರ್ಗದರ್ಶನದಲ್ಲಿ ಗುರುವಾರ ಪ್ರಾರಂಭವಾಯಿತು.
ಸಮಾರಂಭದಂಗವಾಗಿ ಗುರುವಾರ ಬೆಳಿಗ್ಗೆ ಕೋಟೂರು ಶ್ರೀಕಾರ್ತಿಕೇಯ ಭಜನಾ ಮಂದಿರದಿಂದ ಚೆಂಡೆ ವಾದ್ಯ ಘೋಷಗಳೊಂದಿಗೆ ವೈಭವದ ಉಗ್ರಾಣ ತುಂಬಿಸುವ ಘೋಷಯಾತ್ರೆಯು ಶ್ರೀ ಕ್ಷೇತ್ರ ಸನ್ನಿಧಿಗೆ ಸಾಗಿ ಸಂಪನ್ನವಾಯಿತು.
ಶ್ರೀಕ್ಷೇತ್ರ ಸನ್ನಿಧಿಯಲ್ಲಿ ಸಜ್ಜುಗೊಳಿಸಲಾದ ಉಗ್ರಾಣದಲ್ಲಿ ದೀಪಜ್ವಲನ ಮಾಡಿ ಉಗ್ರಾಣ ತುಂಬಿಸುವ ಕಾರ್ಯ ನೆರವೇರಿತು. ಸೀತಾರಾಮ ಬಳ್ಳುಳ್ಳಾಯ ಸೂಕ್ತ ಮಾರ್ಗದರ್ಶನಗಳನ್ನಿತ್ತರು. ಮೇ. 28 ರ ವರೆಗೆ ದ್ರವ್ಯಕಲಶ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.