ಕಾಸರಗೋಡು: ತುಳುನಾಡಿನ ಪರಂಪರೆ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕು, ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಬೇಕು ಎಂಬ ಸದುದ್ದೇಶದಿಂದ ಸದಾ ಕಾರ್ಯನಿರತವಾಗಿರುವ ತುಳುವಲ್ರ್ಡ್ ಕುಡ್ಲ ಸಂಘಟನೆಯು ತುಳುನಾಡಿನಲ್ಲಿ ನಶಿಸಿ ಹೋಗುತ್ತಿರುವ ತುಳು ಜಾನಪದ ಗೀತೆಗಳು ಹಾಗೂ ಪಾಡ್ದನಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಅವರಲ್ಲಿ ಅದರ ಬಗೆಗೆ ಒಲವು ಮೂಡಿಸುವ ಸದುದ್ದೇಶದಿಂದ `ಪದೊ ಪರೆಲ್' ಎಂಬ ತುಳು ಜಾನಪದ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ.
ಸ್ಪರ್ಧೆಯಲ್ಲಿ ಪ್ರಾಯ ಬೇಧವಿಲ್ಲದೆ ಎಲ್ಲರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು ಮೂರು ಹಂತಗಳಲ್ಲಾಗಿ ಸ್ಪರ್ಧೆಯು ನಡೆಯಲಿದೆ. ಅಂತಿಮ ಸುತ್ತಿನ ಸ್ಪರ್ಧೆಯು ಜುಲೈ ತಿಂಗಳ ಕೊನೆಯಲ್ಲಿ ಮಂಗಳೂರಿನಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ.25000, ದ್ವಿತೀಯ ರೂ. 20000, ತೃತೀಯ ರೂ. 15000 ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಸ್ವರದಲ್ಲಿ ತುಳುವಿನ ಒಂದು ಜಾನಪದ ಗೀತೆಯನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತಮ್ಮ ಸ್ವ ವಿವರದೊಂದಿಗೆ ತುಳುವಲ್ರ್ಡ್ ಕುಡ್ಲ ಸಂಸ್ಥೆಯ 9353449388 ವಾಟ್ಸಾಪ್ ಸಂಖ್ಯೆಗೆ ಮೇ 31 ರ ಮುಂಚಿತವಾಗಿ ಕಳುಹಿಸಬೇಕು. ಇದರಲ್ಲಿ ಆಯ್ಕೆಯಾದವರಿಗೆ ಮುಂದೆ ಮೂರು ಸುತ್ತುಗಳಲ್ಲಾಗಿ ಸ್ಪರ್ಧೆಯು ನಡೆಯಲಿರುವುದು. ವಾಟ್ಸಾಪ್‍ಗೆ ಹಾಡುಗಳನ್ನು ಕಳುಹಿಸಿ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದು. ಹೆಚ್ಚಿನ ವಿವರಗಳಿಗೆ ಸಂಸ್ಥೆಯ 9353449388 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಾಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.