ಕುಂಬಳೆ: ದೇಶೀಯ ಅಧ್ಯಾಪಕ ಪರಿಷತ್(ಎನ್.ಟಿ.ಯು) ಸ್ಥಾಪನಾ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಇಂದು ಕುಂಬಳೆ ಶಾಂತಿಪಳ್ಳದ ಮಂದಾರ ನಿವಾಸದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆ ಮತ್ತು ಪ್ರಾಂತ್ಯದ ವಿವಿಧ ಪದಾಧಿಕಾರಿಗಳು ಭಾಗವಹಿಸುವರು. ಪರಿವಾರ ಸಂಘಟನೆಯ ಹಿರಿಯ ನೇತಾರರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಎನ್.ಟಿ.ಯು ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಕಾರ್ಯಕ್ರಮವನ್ನು ಎನ್.ಟಿ.ಯು ಸದಸ್ಯರು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದೆ.